ಫೆ.28 : ಪಂಜದ ಮೂಲಸ್ಥಾನ ಗರಡಿ ಬೈಲುನಲ್ಲಿ ತಾಂಬೂಲ ಪ್ರಶ್ನೆ ಚಿಂತನೆ

0

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ಕಾಚುಕುಜುಂಬ, ಉಳ್ಳಾಕ್ಲು ಗರಡಿಬೈಲು ಮೂಲಸ್ಥಾನ ಸನ್ನಿಧಿಯಲ್ಲಿ ಸಾನಿಧ್ಯಾದಿಗಳ ಗುಣದೋಷ ಚಿಂತನೆಗೋಸ್ಕರ ಒಂದು ದಿನದ ತಾಂಬೂಲ ಪ್ರಶ್ನಾ ಚಿಂತನೆಯು ಫೆ 28 ರಂದು ದೈವಜ್ಞರಾದ ದೈವಜ್ಞರಾದ ನಾರಾಯಣ ರಂಗಾ ಭಟ್ಟ ಮಧೂರು ಹಾಗೂ ದೈವಜ್ಞರಾದ ಸತ್ಯನಾರಾಯಣ ಭಟ್ ಶ್ರೀ ಮಾತಾ ಪಂಜ ಇವರಿಂದ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.