. ಪಂಜದ ಕೆರೆಮೂಲೆ ತರವಾಡು ಮನೆಯಲ್ಲಿ ಶ್ರೀ ಮಹಾಮ್ಮಾಯಿ ದೇವಿಯ ಗೋಂದೋಳು ಪೂಜೆ, ಶ್ರೀ ದೈವಗಳ ನೇಮೋತ್ಸವ ನಡೆಯಿತು.

ಫೆ.14 ರಂದು ರಾತ್ರಿ ಶ್ರೀ ಮಹಾಮ್ಮಾಯಿ ದೇವಿಯ ಗೋಂದೋಳು ಪೂಜೆ . ಫೆ.15 ರಂದು ಮುಂಜಾನೆ ಶ್ರೀ ದೇವಿಯ ಪ್ರಸಾದ ವಿತರಣೆ ನಡೆಯಿತು. ಫೆ.19 ರಂದು ಬೆಳಿಗ್ಗೆ ಗಣಪತಿ ಹೋಮ ಮತ್ತು ಶ್ರೀ ದೈವಗಳಿಗೆ ಕಲಶ ಶುದ್ಧಿ, ಸಂಜೆ ಶ್ರೀ ದೈವಗಳ ಭಂಡಾರ ಹಿಡಿಯುವುದು. ರಾತ್ರಿ ಜೋಡು ಕಲ್ಲುರ್ಟಿ ದೈವಗಳ ನೇಮ, ಕುಪ್ಪೆ ಪಂಜುರ್ಲಿ ದೈವದ ನೇಮ. ಫೆ.20 ರಂದು ಮುಂಜಾನೆ ಧರ್ಮದೈವ ಶ್ರೀ ವರ್ಣಾರ ಪಂಜುರ್ಲಿ ನೇಮ ನಡೆಯಿತು. ಕುಟುಂಬಸ್ಥರು,ನೆಂಟರಿಷ್ಟರು, ಊರವರು, ಬಂಧು ಮಿತ್ರರು ಉಪಸ್ಥಿತರಿದ್ದು ಶ್ರೀ ದೇವಿ, ಶ್ರೀ ದೈವ-ದೇವರ ಪ್ರಸಾದ ಸ್ವೀಕರಿಸಿದರು.