
ಐವರ್ನಾಡು ಗ್ರಾಮದ ನಿಸರ್ಗ ಕಾಲನಿಯ ಕೋಡ್ತಿಲು ಎಂಬಲ್ಲಿ ಶ್ರೀ ಮಹಾಮ್ಮಾಯಿ ದೇವಿಯ ವಾರ್ಷಿಕ ಮಹಾಪೂಜೆ ಹಾಗೂ ಶ್ರೀ ಗುಳಿಗ ದೈವಕ್ಕೆ ತಂಬಿಲ ಸೇವೆ ಫೆ.22 ರಿಂದ ಫೆ.24ರವರೆಗೆ ನಡೆಯಲಿದೆ.
ಫೆ.15ರಂದು ಗೊನೆ ಕಡಿಯಲಾ ಯಿತು. ಫೆ.22 ರಂದು ಬೆಳ್ಳಿಗ್ಗೆ ಗಣಹೋಮ ನಡೆದು ಸಂಜೆ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಭಂಡಾರ ತೆಗೆಯಲಾಯಿತು.
ನಂತರ ಮಾರಿಕಳ ಪ್ರವೇಶ ನಡೆಯಿತು.
ಫೆ.23ರಂದು ಪ್ರಾತ: ಕಾಲ ಮಾರಿಕಳದಲ್ಲಿ ಬಿಂದು ಆವರಣೆ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.




ಈ ಸಂದರ್ಭದಲ್ಲಿ ದೈವಸ್ಥಾನದ
ಗುರಿಕ್ಕಾರಾದ ಕೆಂಚ,
ಶ್ರೀ ಮಹಾಮ್ಮಯಿ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಕೆ.ಪಿ.ಶಿವಪ್ಪ, ಕಾರ್ಯದರ್ಶಿ ದಾಮೋದರ .ಕೆ, ಕೋಶಾಧಿಕಾರಿ ಕೆ.ರಾಘವ
ಶ್ರೀ ಮಹಾಮ್ಮಯಿ ಸೇವಾ ಸಮಿತಿ ಅಧ್ಯಕ್ಷ ಕೆ.ರಾಘವ,ಕಾರ್ಯದರ್ಶಿ ರಾಧ ಬಿ, ಕೋಶಾಧಿಕಾರಿ ಲೋಕೇಶ್ ಕೆ.ಯಂ ಹಾಗೂ ನಿಸರ್ಗ ಕಾಲನಿಯ ನಿವಾಸಿಗಳು, ಊರ, ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
ಫೆ.24 ರಂದು ಬೆಳಿಗ್ಗೆ ಗುಳಿಗ ಮಹಾರಾಜ ದೈವಕ್ಕೆ ತಂಬಿಲ ಸೇವೆ ನಡೆಯಲಿದೆ.