ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುವುದಾಗಿ ಕೊಡಿಯಾಲದ ವ್ಯಕ್ತಿಯೋರ್ವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ ಘಟನೆ ಫೆ.26 ರಂದು ನಡೆದಿದೆ.
ಕೊಡಿಯಾಲದ ಕೂಸಪ್ಪ ನಾಯ್ಕ ಎಂಬವರು ದೂರು ನೀಡಿದ್ದು ದೂರಿನಲ್ಲಿ ಜಾಗದ ವಿಚಾರವಾಗಿ ನಾನು ಮಾತಾಡಿದೆ ಎಂದು ಕ್ಷುಲ್ಲಕ ಕಾರಣ ನೀಡಿ ಫೋನ್ ಕರೆ ಮಾಡಿ ಜಾತಿ ನಿಂದನೆ ಮತ್ತು ಅವಾಚ್ಯ ಶಬ್ದಗಳಿಂದ ಬೈದಿರಯವುದಾಗಿ ಸೀತಾರಾಮ ಗೌಡ ಪಂಜಿಗಾರು, ಚರಣ್ ಗೌಡ,ದರ್ಶನ್ ಗೌಡ,ಜಯರಾಜ್ ಎಂಬವರ ಮೇಲೆ ಪೊಲೀಸ್ ದೂರು ನೀಡಿರುವುದಾಗಿ ತಿಳಿದು ಬಂದಿದೆ.