ಶಿವರಾತ್ರಿ ಹಿನ್ನಲೆ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತ ಸಾಗರ

0

ಮಹಾಶಿವರಾತ್ರಿಯ ದಿನವಾದ ಫೆ.೨೬ ರಂದು ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಅಧಿಕ ಸಂಖ್ಯೆ ಎಲ್ಲಿ ಭಕ್ತರು ದೇವರ ದರ್ಶನಕ್ಕಾಗಿ ಬಂದಿದ್ದರು.
ಫೆ. ೨೭ ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಿಗ್ಗೆಯಿಂದಲೇ ಭಕ್ತರ ಸಾಗರವೇ ಸೇರಿತ್ತು. ಶ್ರೀ ದೇವಳದ ಎದುರಿನ ರಥ ಬೀದಿಯಲ್ಲಿ ಭಕ್ತರು ಜಮಾವಣೆಗೊಂಡು ಅಲ್ಲಿಂದ ಸರತಿ ಸಾಲಿನಲ್ಲಿ ದೇವಳದ ಅಂಗಣಕ್ಕೆ ಪ್ರವೇಶಿಸಿ ಶ್ರೀ ದೇವರ ದರ್ಶನ ಮಾಡಿರುವರು. ಶ್ರೀ ದೇವಳದ ವತಿಯಿಂದ ಭಕ್ತರಿಗೆ ಅನುಕೂಲವಾಗುವಂತೆ, ಸರತಿ ಸಾಲು ಪ್ರಸಾದ ವಿತರಣಾ ಕೌಂಟರ್ ಗಳು ಹಾಗೂ ಬೋಜನ ಪ್ರಸಾದಕ್ಕಾಗಿ ಎಲ್ಲ ವ್ಯವಸ್ಥೆಗಳನ್ನ ಮಾಡಲಾಗಿತ್ತು. ಉತ್ತರ ಕರ್ನಾಟಕದಿಂದಲೇ ಬಂದಂತ ಹೆಚ್ಚಿನ ಭಕ್ತರು ದೊಡ್ಡದಾದ ಹಾಗೂ ಸಣ್ಣದಾದ ಲಾರಿಗಳಲ್ಲಿ ಬರುತ್ತಿದ್ದು ಕಂಡು ಬಂತು ಕರ್ನಾಟಕ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ರಾಜ್ಯದ ವಿವಿಧ ಕಡೆಗಳಿಂದ ಕುಕ್ಕೆ ಕ್ಷೇತ್ರಕ್ಕೆ ಬಂದು ಹೋಗಲು ಬಸ್ಸಿನ ವ್ಯವಸ್ಥೆಯನ್ನು ಮಾಡಿದ್ದರು. ಕ್ಷೇತ್ರದ ಎಲ್ಲೆಡೆ ಪಾರ್ಕಿಂಗ್ ಜಾಗದಲ್ಲಿ ಭಕ್ತಾದಿಗಳ ವಾಹನಗಳ ತುಂಬಿಕೊಂಡಿದ್ದವು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯವರು, ದೇವಳದ ಹೋಂ ಗಾರ್ಡ್, ಭದ್ರತಾ ಸಿಬ್ಬಂದಿಗಳು ಭಕ್ತರ ಅನುಕೂಲಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರು.