ನಿರೂಪಕಿ ಮುಮ್ತಾಝ್ ನೇಲ್ಯಡ್ಕರವರಿಗೆ ರೋಟರಿ ಎಕ್ಸಲೆನ್ಸ್ ಅವಾರ್ಡ್
ಮುಖ್ಯ ಶಿಕ್ಷಕಿ ಶ್ರೀಮತಿ ರಾಧಮ್ಮರವರಿಗೆ ರೋಟರಿ ನೇಷನ್ ಬಿಲ್ಡ್ ಅವಾರ್ಡ್

sಸುಳ್ಯ ರೋಟರಿ ಕ್ಲಬ್‌ಗೆ ಜಿಲ್ಲಾ ರಾಜ್ಯಪಾಲ ರೊ. ವಿಕ್ರಂ ದತ್ತರವರ ಅಧಿಕೃತ ಭೇಟಿ ಕಾರ್ಯಕ್ರಮ ಫೆ. ೨೭ರಂದು ರೋಟರಿ ಶಾಲಾ ಸಭಾಂಗಣದಲ್ಲಿ ನಡೆಯಿತು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಯೋಗಿತಾ ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ವಲಯ ೫ರ ಸಹಾಯಕ ರಾಜ್ಯಪಾಲ ರೊ. ವಿನಯಕುಮಾರ್, ಝೋನಲ್ ಲೆಫ್ಟಿನೆಂಟ್ ರೊ. ಪ್ರಭಾಕರನ್ ನಾಯರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಟಿ.ವಿ. ವಿಕ್ರಂನ ಖ್ಯಾತ ನಿರೂಪಕಿ ಮುಮ್ತಾಝ್ ನೇಲ್ಯಡ್ಕರವರಿಗೆ ರೋಟರಿ ಎಕ್ಸಲೆನ್ಸ್ ಅವಾರ್ಡ್, ಬೊಳುಬೈಲು ಸ.ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರಾಧಮ್ಮರವರಿಗೆ ರೋಟರಿ ನೇಷನ್ ಬಿಲ್ಡ್ ಅವಾರ್ಡ್ ನೀಡಿ ಗೌರವಿಸಲಾಯಿತು.



ಸ್ವಚ್ಛತಾ ಸೇವೆ ನಡೆಸುತ್ತಿರುವ ರೋಟರಿ ಕ್ಲಬ್ ಸದಸ್ಯರಾದ ಡಾ. ಕೃಷ್ಣ ಭಟ್, ಸಿ.ಎಚ್. ಪ್ರಭಾಕರ ನಾಯರ್‌ರವರನ್ನು ಗೌರವಿಸಲಾಯಿತು. ಕ್ಲಬ್‌ಗೆ ನೂತನ ಸದಸ್ಯರುಗಳಾಗಿ ಲೋಕೇಶ್ ಪೆರ್ಲಂಪಾಡಿ ಹಾಗೂ ಅನಂತ್‌ರಾಜ್ ಮಾಪನಮನೆಯವರು ಸೇರ್ಪಡೆಯಾದರು. ಇದೇ ಸಂದರ್ಭ ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಗೆ ಫ್ಯಾನ್‌ಗಳನ್ನು, ಅಜ್ಜಾವರ ಸ.ಹಿ.ಪ್ರಾ.ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.

ಜಿಲ್ಲಾ ರಾಜ್ಯಪಾಲ ವಿಕ್ರಂ ದತ್ತರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಡಾ. ಸ್ಮಿತಾ ಹರ್ಷವರ್ಧನ ಪ್ರಾರ್ಥಿಸಿ, ಸುಳ್ಯ ರೋಟರಿ ಕ್ಲಬ್‌ನ ಕಾರ್ಯದರ್ಶಿ ಡಾ. ಹರ್ಷಿತಾ ಪುರುಷೋತ್ತಮ ವರದಿ ವಾಚಿಸಿದರು. ಡಾ. ರಾಮಮೋಹನ್ ಗವರ್ನರ್ ಅವರ ಪರಿಚಯ ವಾಚಿಸಿದರು. ಖಜಾಂಜಿ ಹರಿರಾಯ ಕಾಮತ್ ವಂದಿಸಿದರು. ರೋಟರಿ ಜಿಲ್ಲೆಯ ವಿವಿಧ ಪದಾಧಿಕಾರಿಗಳು, ಸುಳ್ಯ ರೋಟರಿ ಕ್ಲಬ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.