ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವರ ಜಾತ್ರೋತ್ಸವವು ಮಾ.4 ರಿಂದ 6 ರವರೆಗೆ ನಡೆಯಲಿದ್ದು, ಇದರ ಗೊನೆಮುಹೂರ್ತ ಕಾರ್ಯಕ್ರಮವು ಫೆ.25 ರಂದು ನಡೆಯಿತು.

ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಎಸ್ ಗಂಗಾಧರ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ, ನಿಕಟಪೂರ್ವ ಅಧ್ಯಕ್ಷ ರತ್ನಾಕರ ಗೌಡ ಬಳ್ಳಡ್ಕ, ಅರ್ಚಕ ವೆಂಕಟ್ರಮಣ ಭಟ್, ಜಾತ್ರೋತ್ಸವ ಸಮಿತಿ ಉಪಾಧ್ಯಕ್ಷರು, ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


