ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ
ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ ಸಿಲ್ವರ್ ಜೋನ್ ಫೌಂಡೇಶನ್ ಒಲಿಂಪ್ಯಾಡ್ಸ್ ನ್ಯೂ ಡೆಲ್ಲಿ ಆಯೋಜಿಸಿರುವ ಇಂಟರ್ನ್ಯಾಷನಲ್ ಒಲಂಪಿಯಾಡ್ ಆಫ್ ಇಂಗ್ಲಿಷ್ ಲ್ಯಾಂಗ್ವೇಜ್ ಪರೀಕ್ಷೆಯಲ್ಲಿ ಒಟ್ಟು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು ಅದರಲ್ಲಿ ಎಂಟು ವಿದ್ಯಾರ್ಥಿಗಳಾದ ರುಥ್ವಿ ನವೀನ್ 1ನೇ ತರಗತಿ, ಲಿಶಾಂತ್ ಪಿ ಆರ್ 2ನೇ ತರಗತಿ, ವಿದ್ವಾನ್ ಆರ್ ದಾಸ್ 3ನೇ ತರಗತಿ, ಸಮೀಕ್ಷಾ ಯು 4ನೇ ತರಗತಿ, ಸಂಚಿತ ಎ 5ನೇ ತರಗತಿ, ನಿಕ್ಷಿತ್ ಕಾಡುಪಂಜ 7ನೇ ತರಗತಿ, ಸೃಜನ ಕೆ ಎಸ್ 8ನೇ ತರಗತಿ, ಜೈನಿಕಾ ಸಿ ಬಿ 9ನೇ ತರಗತಿ ಇವರು ಚಿನ್ನದ ಪದಕಗಳನ್ನು ಪಡೆದುಕೊಂಡಿರುತ್ತಾರೆ, ಆರು ವಿದ್ಯಾರ್ಥಿಗಳಾದ ಪೂರ್ವಿ ಕೆ 2ನೇ ತರಗತಿ, ನಿಹಾಲ್ ಮುರಳಿ ಎಸ್ 3ನೇ ತರಗತಿ, ರತ್ನೇಶ್ ಗೌಡ 4ನೇ ತರಗತಿ, ಝಲ್ಪ ಆಯಿಶ 7ನೇ ತರಗತಿ, ಫರ ಖದೀಜ 8ನೇ ತರಗತಿ, ಮಾನ್ಯ ಪಿ ಕೆ 9ನೇ ತರಗತಿ ಇವರು ಬೆಳ್ಳಿ ಪದಕಗಳನ್ನು ಪಡೆದುಕೊಂಡಿರುತ್ತಾರೆ, ಮತ್ತು ಐದು ವಿದ್ಯಾರ್ಥಿಗಳಾದ ಧನ್ವಿ ಬಿ ಎನ್ 2ನೇ ತರಗತಿ, ಅಧಿತ್ ಏ ಜೆ 3ನೇ ತರಗತಿ, ಕುನಲ್ ಎನ್ ಎಲ್ 4ನೇ ತರಗತಿ, ಆತ್ಮಿಕ್ ಸಿ ಜಿ 7ನೇ ತರಗತಿ, ಹಂಸಿನಿ ಹೆಚ್ ಎಸ್ 8ನೇ ತರಗತಿ ಇವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಜ್ಞಾನ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಇಂಜಿನಿಯರ್, ಉಪನ್ಯಾಸಕರು ಮತ್ತು ಕವಿಯು ಆಗಿರುವಂತ ವಿಜಯ್ ಕುಮಾರ್ ಕನಿಚರ್ ರವರು ವಿಜೇತ ವಿದ್ಯಾರ್ಥಿಗಳಿಗೆ ಪದಕವನ್ನು ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಿದರು. ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್, ಶಿಕ್ಷಕ , ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Home Uncategorized ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ. ಸಿಲ್ವರ್ ಜೋನ್ ಫೌಂಡೇಶನ್ ಒಲಿಂಪ್ಯಾಡ್ಸ್ ಪರೀಕ್ಷೆಯ ಬಹುಮಾನ...