
ಜೇಸಿ ಐ ಪಂಜ ಪಂಚಶ್ರೀ ಪ್ರಾಂತ್ಯ ಎಫ್ ವಲಯ 15 ಹಾಗೂ ಅಮೃತಾ ಮಹಿಳಾ ಮಂಡಲ( ರಿ.)ಪಂಬೆತ್ತಾಡಿ ಮತ್ತು ಅಕ್ಷತಾ ಯುವತಿ ಮಂಡಲ(ರಿ.) ಪಂಬೆತ್ತಾಡಿ ಇದರ ಆಶ್ರಯದಲ್ಲಿ ‘ಆಯೋಜನೆ’ಯಶಸ್ವಿ ಕಾರ್ಯಕ್ರಮ ಸಂಘಟನೆಗೆ ಪರಿಣಾಮಕಾರಿ ನಾಯಕತ್ವ ತರಬೇತಿ ಕಾರ್ಯಗಾರವು ಮಾ.1 ರಂದು ಪಂಚಾಯತ್ ಸಭಾಭವನ ಪಂಬೆತ್ತಾಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ HGF ವಾಚಣ್ಣ ಕೆರೆಮೂಲೆ ವಹಿಸಿಕೊಂಡರು.

ಉದ್ಘಾಟನೆಯನ್ನು ವಲಯ 15 ಕಾರ್ಯಕ್ರಮ ವಿಭಾಗ ನಿರ್ದೇಶಕ JFDಕಾಶಿನಾಥ್ ಗೋಗಟ್ಟೆ ನೆರವೇರಿಸಿಕೊಟ್ಟರು. ವಲಯ ತರಬೇತುದಾರರು ವಲಯ 15 ಭಾರತೀಯ ಜೇಸಿಸ್ JFM ಸೋಮಶೇಖರ ನೇರಳ ರವರು ತರಬೇತಿ ನೀಡಿದರು. ಅಮೃತಾ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಲಲಿತಾ ಬಾಬ್ಲುಬೆಟ್ಟು , ಅಕ್ಷತಾ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಮಠ ಹಾಗೂ ಜೇಸಿಐ ಪಂಜ ಪಂಚಶ್ರೀ
ಕಾರ್ಯದರ್ಶಿ HGF ಅಶ್ವತ್ ಬಾಬ್ಲುಬೆಟ್ಟು,ಕಾರ್ಯಕ್ರಮ ನಿರ್ದೇಶಕ HGF ಕಿರಣ್ ಕಂರ್ಬುನೆಕ್ಕಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರವೀಣ್ ಕುಂಜತ್ತಾಡಿ ವೇದಿಕೆಗೆ ಆಹ್ವಾನಿಸಿದರು. ಜೇಸಿ ವಾಣಿಯನ್ನು HGF ಕಿರಣ್ ಕಂರ್ಬುನೆಕ್ಕಿಲ ವಾಚಿಸಿದರು. ಉದ್ಘಾಟಕರ ಪರಿಚಯವನ್ನುHGF ಕಿರಣ್ ಕಂರ್ಬುನೆಕ್ಕಿಲ, ತರಬೇತುದಾರರು ಪರಿಚಯವನ್ನು ಜೇಸಿ ಪ್ರವೀಣ್ ಕುಂಜತ್ತಾಡಿ ನೆರವೇರಿಸಿದರು. ಕಾರ್ಯದರ್ಶಿ HGF ಅಶ್ವತ್ ಬಾಬ್ಲುಬೆಟ್ಟು ವಂದಿಸಿದರು. ಕಾರ್ಯಕ್ರಮದಲ್ಲಿ ಜೇಸಿ ಸದಸ್ಯರು ಹಾಗೂ ಮಹಿಳಾ ಮಂಡಲ ಮತ್ತು ಯುವತಿ ಮಂಡಲದ ಸದಸ್ಯರು ಭಾಗವಹಿಸಿದ್ದರು.
