
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸುಕ್ಷೇತ್ರ ನವಲಿಯ ಶ್ರೀ ಜಡೆ ಶಂಕರಲಿಂಗ ದೇವರ ಭಕ್ತಿಗೀತೆ ನವಲಿಯ ಶ್ರೀ ಜಡೇ ಶಂಕರಲಿಂಗ ದೇವಸ್ಥಾನದಲ್ಲಿ ಬಿಡುಗಡೆಯಾಯಿತು.
ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಜರುಗುವ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಭಕ್ತಿಗೀತೆಯನ್ನು ಬಿಡುಗಡೆಗೊಳಿಸಲಾಯಿತು.
ನವಲಿ ಗ್ರಾಮದ ಹಿರಿಯರಾದ ಯಲ್ಲಪ್ಪ ಇಂಗಳಗಿಯವರು ನವಲಿ ಜಡೆ ಶಂಕರಲಿಂಗ ಭಕ್ತಿಗೀತೆಯನ್ನು ಬಿಡುಗಡೆ ಮಾಡಿದರು. ಹಿರಿಯ ಕಲಾವಿದ, ತಬಲ ವಾದಕ ಹನುಮ ದಾಸ ನವಲಿ ಆವರು ಪೋಸ್ಟರ್ ಬಿಡುಗಡೆ ಮಾಡಿದರು.

ನಂತರ ದೇವಾಲಯ ಪ್ರಾಂಗಣದಲ್ಲಿ ಭಕ್ತಿ ಗೀತೆಯನ್ನು ಪ್ರಸಾರ ಮಾಡಲಾಯಿತು. ಈ ಗೀತೆಯ ಸಾಹಿತ್ಯ ಬರೆದ ಕವಿ, ಯುವ ರಾಜಕಾರಣಿ, ಸಮಾಜ ಚಿಂತಕರಾದ ವಿಜಯದಾಸ್ ನವಲಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.



ಭಕ್ತಿಗೀತೆಯನ್ನು ಹಾಡಿದ ಸಾಹಿತಿ, ಕವಿ, ಜ್ಯೋತಿಷಿ, ಚಿತ್ರನಿರ್ದೇಶಕ, ಸಂಘಟಕ, ಗಾಯಕ ಕೋಡಿಹಾಳದ ಎಚ್. ಭೀಮರಾವ್ ವಾಷ್ಠರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯರಾದ ಸೈಯದ್ ಸಾಬ್ ದೊಡ್ಮನಿ,, ಹುಲುಗಪ್ಪ ಬಂಗಾರಗುಂಡ,ಅಯ್ಯನಗೌಡ್ರು, ಅರ್ಚಕರಾದ ಬಸವರಾಜ್ ಹೂಗಾರ್, ಮುತ್ತಣ್ಣ ಹೂಗಾರ್ ಉಪಸ್ಥಿತರಿದ್ದರು. ಎಚ್. ಭೀಮರಾವ್ ವಾಷ್ಠರ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ದುರ್ಗೇಶ್ ವಂದಾಲ್ ನವಲಿರವರು ಧನ್ಯವಾದ ಸಮರ್ಪಿಸಿದರು. ಬಸವರಾಜ್ ಗೋಟೂರ್ ಕೋಡಿಹಾಳ ಆವರು ಸಹಕರಿಸಿದರು.