ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ’ಗ್ರಾಜ್ಯುವೇಶನ್ ಡೇ’ ಆಚರಣೆ ಮತ್ತು ಪೋಷಕರ ಸಭೆ

0

ಸುಳ್ಯದ ಆಯುರ್ವೇದ ಕಾಲೇಜು ಮುಂಭಾಗದ ಅಡ್ಕಾರ್ ಆರ್ಕೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ಶಾಲೆಯಿಂದ ಒಂದನೇ ತರಗತಿಗೆ ತೆರಳಿರುವ ಯುಕೆಜಿ ವಿಥ್ಯಾರ್ಥಿಗಳಿಗೆ ಗ್ರಾಜ್ಯುವೇಶನ್ ಡೇ’ ಕಾರ್ಯಕ್ರಮ ಮತ್ತು ಪೋಷಕರ ಸಭೆ ಮಾ.1ರಂದು ನಡೆಯಿತು. ಇದರೊಂದಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸಿ ಪ್ರಶಸ್ತಿಯನ್ನು ನೀಡಲಾಯಿತು.

ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಟಿ.ಜಿ., ಅಧ್ಯಕ್ಷ ಶುಭಕರ ಬಿ.ಸಿ. ಹಾಗೂ ಪೋಷಕರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಗೀತಾಂಜಲಿ ಟಿ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಶೈಕ್ಷಣಿಕ ಚಟುವಟಿಕೆಯ ಕುರಿತು ಪೋಷಕರಿಗೆ ತಿಳಿ ಹೇಳಿದರು.


ಪೋಷಕರು ಕೂಡ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ಶಿಕ್ಷಕಿ ಫೇಬಿದ ರವರು ಕಾರ್ಯಕ್ರಮ ನಿರೂಪಿಸಿ,
ಶಿಕ್ಷಕರಾದ ಶ್ರೀಮತಿ ಲಕ್ಷ್ಮಿ ಶೆಟ್ಟಿ, ಪ್ರಮೀಳ, ದೀಕ್ಷಾ, ಸುಕನ್ಯರವರು ಸಹಕರಿಸಿದರು.