ಪ್ರೇಕ್ಷಕರ ಮನ ಗೆದ್ದು ಪುತ್ತೂರಿನ ಭಾರತ್ ಮಾಲ್ ನಲ್ಲಿ 2ನೇ ವಾರಕ್ಕೆ ದಾಪುಗಾಲು ಇಟ್ಟ ಚಿತ್ರ
ಸುಳ್ಯದ ಮಯೂರ್ ಅಂಬೆಕಲ್ಲು ನಿರ್ದೇಶನ
ಫೆ. 21ರಂದು ಪುತ್ತೂರಿನ ಭಾರತ್ ಮಾಲ್ ನಲ್ಲಿ ಬಿಡುಗಡೆ ಗೊಂಡಿರುವ ಭಾವ ತೀರ ಯಾನ ಚಲನಚಿತ್ರ ಪ್ರೇಕ್ಷಕರ ಮನಗೆದ್ದಿದ್ದು, 2ನೇ ವಾರಕ್ಕೆ ದಾಪು ಗಾಲು ಇಡುತ್ತಿದೆ.
ಪೆಬ್ರವರಿ ತಿಂಗಳಿನಲ್ಲಿ ಬಿಡುಗಡೆಗೊಂಡ ಚಲನಚಿತ್ರಗಳಲ್ಲಿ ಬೆಂಗಳೂರಿನ ಫಿಲ್ಮ್ಫ್ ಕಾರ್ನರ್ ನ ವತಿಯಿಂದ ರಾಜ್ಯಮಟ್ಟದಲ್ಲಿ ಆಯ್ಕೆ ಮಾಡುವ ತಿಂಗಳ ಮೂವಿ ಆಫ್ ವೀಕ್ ಗೆ “ಭಾವ ತೀರ ಯಾನ” ಚಿತ್ರ ಆಯ್ಕೆಯಾಗಿದೆ.
ಈ ಚಲನ ಚಿತ್ರ ಮಾ.6ರವರೆಗೆ ವೀಕ್ಷಿಸಬಹುದಾಗಿದೆ.