Home Uncategorized ಅರಂತೋಡಿನಲ್ಲಿ ಪ್ರಧಾನಮಂತ್ರಿ ವಿಡಿವಿಕೆ ಮಾರ್ಟ್ ಉದ್ಘಾಟನೆ

ಅರಂತೋಡಿನಲ್ಲಿ ಪ್ರಧಾನಮಂತ್ರಿ ವಿಡಿವಿಕೆ ಮಾರ್ಟ್ ಉದ್ಘಾಟನೆ

0

ಭಾರತ ಸರಕಾರದ ಬುಡಕಟ್ಟು ಮಂತ್ರಾಲಯ, ಟ್ರೈಪೆಡ್ ಹಾಗೂ DAY-NRLM ( ಸಂಜೀವಿನಿ) ಜೊತೆಗೂಡಿ ಅನುಷ್ಠಾನಗೊಳಿಸುತ್ತಿರುವ PM-VDVK ಯಡಿ ಉತ್ಪಾದಿಸುತ್ತಿರುವ ವಿವಿಧ ಉತ್ಪನ್ನಗಳ ಕರ್ನಾಟಕದ ಮೊತ್ತ ಮೊದಲ ಪ್ರಕೃತಿ VDVK ಮಾರ್ಟ್ ನ್ನು ಮಾ. ೦೬ರಂದು ಅರಂತೋಡಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ. ಐಎಎಸ್‌ರವರು ಲೋಕಾರ್ಪಣೆಗೊಳಿಸಿ VDVK ಯ ನೂತನ ಉತ್ಪನ್ನಗಳನ್ನು ಅನಾವರಣಗೊಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರಂತೋಡು ಪ್ರಕೃತಿ VDVK ಅಧ್ಯಕ್ಷೆ ಶೋಭಲತಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಣ್ಣ ಹಾಗೂ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಶುಭ ಹಾರೈಸಿದರು. ವೇದಿಕೆಯಲ್ಲಿ ದುರ್ಗಾ ಮಾತಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಉಪಸ್ಥಿತರಿದ್ದರು.


ಜಿಲ್ಲಾ ಪಂಚಾಯಿತಿನ NRLM DPM ಹರಿಪ್ರಸಾದ್ ಗೌಡ ಪ್ರಾಸ್ತಾವಿಕ ವಾಗಿ ಮಾತಾಡಿದರು. ಒಕ್ಕೂಟದ ಸದಸ್ಯೆ ರೇವತಿ ಪ್ರಾರ್ಥಿಸಿದರು. ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಮ್. ಆರ್. ಸ್ವಾಗತಿಸಿ, MBK ಶ್ವೇತಾರವರು ವಂದಿಸಿದರು. ಮೇರಿ, ಅವಿನಾಶ್ ದೆಲ್ಲಾರಿಯೋ ಮತ್ತು ಆಯೋಜನೆ ಮಾಡಿದ ಕಾರ್ಯಕ್ರಮವನ್ನು ಶ್ರೀಮತಿ ಅಭಿಲಾಷ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮಕ್ಕೆ ಅರಂತೋಡು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ, ಸ್ವಚ್ಛತಾ ಘಟಕ ಸಿಬ್ಬಂದಿಗಳು ಮತ್ತು ದುರ್ಗಾ ಮಾತಾ ಸಂಜೀವಿನಿ ಒಕ್ಕೂಟದ ಒಃಏ ಸುಮತಿ ಅಡ್ಕಬಳೆ ಮತ್ತು ಒಕ್ಕೂಟದ ಪದಾಧಿಕಾರಿಗಳು ಸಹಕರಿಸಿದರು.

ಈ VDVKಮಾರ್ಟ್ ನಲ್ಲಿ ಜೆಲ್ಲೆಯ ವಿಶೇಷ ಉತ್ಪನ್ನಗಳಾದ ಕಾಡು ಜೇನು, ಚಾಪೆ, ಹಾಳೆ ತಟ್ಟೆ, ಬಳ್ಳಿಗಳ ಬುಟ್ಟಿ, ತೆಂಗಿನ ಚಿಪ್ಪಿನ ಸೌಟು, ಕಾಡುನಲ್ಲಿ, ಗಾಂಧಾರಿ ಮೆಣಸು, ಧೂಪ, ಕಾಡು ಅರಸಿನ, ದೇಸಿ ತುಪ್ಪ, ವಾಸ್, ಕ್ಯಾಂಡಲ್, ಮೀನಿನ ಕೂಳಿ, ಇನ್ನಿತರ ಹತ್ತು ಹಲವು ವಸ್ತುಗಳು ಲಭ್ಯವಿದೆ.

NO COMMENTS

error: Content is protected !!
Breaking