ಪಾಲ್ತಾಡು ಕಾಪುತಕಾಡು ಶ್ರೀ ರಾಜಗುಳಿಗ ಸಾನಿಧ್ಯದ ಪ್ರತಿಷ್ಠಾ ವಾರ್ಷಿಕೋತ್ಸವ, ದೈವದ ಕೋಲ

0

ಬೆಳ್ಳಾರೆ : ಪೆರುವಾಜೆ -ಪಾಲ್ತಾಡಿ-ಕೊಳ್ತಿಗೆ ಗ್ರಾಮದ ವ್ಯಾಪ್ತಿಗೆ ಸಂಬಂಧಪಟ್ಟ ಪಾಲ್ತಾಡು ಕಾಪುತಕಾಡು ಶ್ರೀರಾಜಗುಳಿಗ ಸಾನಿಧ್ಯದ ಪ್ರತಿಷ್ಠಾ ದಿನ ಹಾಗೂ ದೈವದಕೋಲವು ಮಾ.9 ರಂದು ನಡೆಯಿತು.

ಮಾ.9 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ ,ಸ್ಥಳ ಶುದ್ದಿ , ಶ್ರೀ ಮಹಾಗಣಪತಿ ಹೋಮ ನಡೆಯಿತು.

ಸಂಜೆ ದೈವಕ್ಕೆ ಎಣ್ಣೆ ವೀಳ್ಯ ಕೊಟ್ಟು ,ರಾತ್ರಿ ಶ್ರೀರಾಜಗುಳಿಗ ದೈವದ ನರ್ತನ ಸೇವೆ ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ,ಮೊಕ್ತೇಸರ ಅರುಣ್ ಕುಮಾರ್ ರೈ ನಳೀಲು, ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆ,ನಿರಂಜನ್ ರೈ ಪಾಲ್ತಾಡು,ಚೆನ್ನಾವರ ಉಳ್ಳಾಕುಲು ದೈವಸ್ಥಾನದ ಕಾರ್ಯದರ್ಶಿ ದೀಕ್ಷಿತ್ ಜೈನ್,
ಶ್ರೀ ರಾಜಗುಳಿಗ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಪಿ.ಮಂಜಪ್ಪ ರೈ ,ಕಾರ್ಯಾಧ್ಯಕ್ಷ ದೇವರಾಜ ಆಳ್ವ,ಅಧ್ಯಕ್ಷ ಡಾ.ಹರಿಕೃಷ್ಣ ರೈ ಜಿ.ಎನ್.,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ,ಉಪಾಧ್ಯಕ್ಷರಾದ ಸುಧಾಮ ಮಣಿಯಾಣಿ ಸುಂದರ ನಾಯ್ಕ ,ಜತೆ ಕಾರ್ಯದರ್ಶಿಗಳಾದ ದಿನೇಶ್ ಶಾಂತಿಮೂಲೆ, ಶಶಿಕುಮಾರ್,ಕೋಶಾಧಿಕಾರಿ ಬಾಬು ನಾಯ್ಕ ಶಾಂತಿಮೂಲೆ ಮೊದಲಾದವರಿದ್ದರು.

ಕಾರಣಿಕ ನೆಲೆ
ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಮೂರು ವರ್ಷಗಳ ಹಿಂದೆ ಈ ರಾಜಗುಳಿಗ ಸಾನಿಧ್ಯದ ಪ್ರತಿಷ್ಠೆ ನಡೆದಿತ್ತು.ಈ ಬಾರಿ ಮೂರನೇ ವರ್ಷದ ನೇಮೋತ್ಸವ ವಿಜ್ರಂಬಣೆಯಿಂದ ನಡೆಯಿತು.

ಇಲ್ಲಿ ಪ್ರತೀ ತಿಂಗಳು 9 ನೇ ತಾರೀಖಿನಂದು ದೀಪರಾಧನೆ ನಡೆಯುತ್ತದೆ. ಮೂರು ತಾಲೂಕಿನ (ಕಡಬ,ಪುತ್ತೂರು,ಸುಳ್ಯ) ಗಡಿಯ ಮಧ್ಯದಲ್ಲಿರುವ ಈ ಸಾನಿಧ್ಯಕ್ಕೆ ಮೂರು ವರ್ಷದಲ್ಲೇ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.ಈ ದೈವ ಸಾನಿಧ್ಯದ ಪ್ರತಿಷ್ಠೆಯ ಬಳಿಕ ಭಕ್ತಾದಿಗಳ ಎಲ್ಲಾ ಪ್ರಾರ್ಥನೆಯೂ ಈಡೇರಿದೆ.ವಿಶೇಷವಾಗಿ ಕಂಕಣ ಭಾಗ್ಯ,ಸಂತಾನ ಭಾಗ್ಯ ಪ್ರಾಪ್ತಿಗೆ ಪ್ರಾರ್ಥಿಸಿ ಫಲ ಪಡೆದವರು ಹಲವು ಮಂದಿ ಇದ್ದಾರೆ.