ಗುತ್ತಿಗಾರು: ಶಂಖಶ್ರೀ ಸ್ತ್ರೀಶಕ್ತಿ ಗೊಂಚಲಿನ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ‌‌‍

0

      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸ್ತ್ರೀಶಕ್ತಿ ಗೊಂಚಲಿನ ಮಹಾಸಭೆ ಮಾ. 11 ರಂದು  ಪರಿಶಿಷ್ಟ ಪಂಗಡದ ಸಭಾಭವನ ಗುತ್ತಿಗಾರು ಇಲ್ಲಿ ನಡೆಯಿತು.  

         

ಸಭೆಯ ಅಧ್ಯಕ್ಷತೆಯನ್ನು ಗೊಂಚಲಿನ ಅಧ್ಯಕ್ಷರಾದ ಶ್ರೀಮತಿ ಸೆಲಿನಾ ಸೆಬಾಸ್ಟಿನ್ ವಹಿಸಿದ್ದರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ದೀಪಿಕಾ ರವರು ಸಂಘದ ಸದಸ್ಯರಿಗೆ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.

ವೇದಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಒಕ್ಕೂಟದ ಅಧ್ಯಕ್ಷರಾದ ಕುl ಲತಾ ಅಂಬೆಕಲ್ಲು, ಗ್ರಾಮ ಪಂಚಾಯತ್ ಸದಸ್ಯರಾದ ಲತಾ ಆಜಡ್ಕ, ಗೊಂಚಲಿನ ಉಪಾಧ್ಯಕ್ಷರಾದ ಲಲಿತಾ ಶ್ರೀಧರ್, ಗೊಂಚಲಿನ ಕಾರ್ಯದರ್ಶಿ ದಿವ್ಯ ವಿಶ್ವನಾಥ್, ಜತೆ ಕಾರ್ಯದರ್ಶಿ ಮಾಲತಿ ಮೆಟ್ಟಿನಡ್ಕ, ಕೆನರಾ ಬ್ಯಾಂಕಿನ ಪ್ರತಿನಿಧಿ ಸುಜಾತ ಉಪಸ್ಥಿತರಿದ್ದರು. ಸದಸ್ಯರಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಸ್ತ್ರೀ ಶಕ್ತಿ ಸಂಘದ ಹಿರಿಯರಾದ ಶ್ರೀಮತಿ ಚಿನ್ನಮ್ಮ ಇವರನ್ನು ಸನ್ಮಾನಿಸಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಶ್ರೀಮತಿ ಯಮಿತಾ ಪೂರ್ಣಚಂದ್ರ ಗೊಂಚಲಿನ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ತೀರ್ಥಕುಮಾರಿ, ಉಪಾಧ್ಯಕ್ಷರಾಗಿ ರಮ್ಯ ನಡುಗಲ್ಲು, ಜೊತೆ ಕಾರ್ಯದರ್ಶಿಯಾಗಿ ಪದ್ಮಾವತಿ ಮೊಗ್ರ ಆಯ್ಕೆಯಾದರು. ಶ್ರೀಮತಿ ಅನಿತಾ ಮಹೇಶ್ ವರದಿ ಮತ್ತು ಲೆಕ್ಕಾಚಾರ ಮಂಡಿಸಿ ಸ್ವಾಗತಿಸಿ ವಂದಿಸಿದರು. ಯಮಿತಾ ಪೂರ್ಣಚಂದ್ರ ಕಾರ್ಯಕ್ರಮ ನಿರೂಪಿಸಿದರು.