ಬಳ್ಪ ಗ್ರಾಮದ ಕುಮನಮಾಳ್ಯ ಗ್ರಾಮ ದೈವಸ್ಥಾನದಲ್ಲಿ ಶ್ರೀ ಉಳ್ಳಾಕುಲು ಮತ್ತು ಶ್ರೀ ಶಿರಾಡಿ ರಾಜನ್ ದೈವ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಠಾ ಕುಂಭಾಭಿಷೇಕ ಹಾಗೂ ಕಾಲಾವಧಿ ನೇಮೋತ್ಸವ ಮಾ. 15ರಂದು ಮೊದಲ್ಗೊಂಡು ಮಾ. 18ರ ತನಕ ತಂತ್ರಿಗಳಾದ ಪಾವಂಜೆ ವಾಗೀಶ ಶಾಸ್ತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ಮಾ. 10ರಂದು ಗೊನೆಮುಹೂರ್ತ ನಡೆಯಿತು.
ಮಾ. 14ರಂದು ತಂತ್ರಿಗಳ ಆಗಮನವಾಯಿತು. ಮಾ. 15ರಂದು ವಿವಿಧ ವೈದಿಕ ಕಾರ್ಯಗಳು ನಡೆಯಲಿದೆ. ಮಾ. 16ರಂದು ಶ್ರೀ ಶಿರಾಡಿ ರಾಜನ್ ದೈವ ಮತ್ತು ಶ್ರೀ ಉಳ್ಳಾಕುಲು ಹಾಗೂ ಪರಿವಾರ ದೈವಗಳಿಗೆ ಪ್ರತ್ಯೇಕವಾಗಿ ಕಲಶಾಭಿಷೇಕ, ತಂಬಿಲ, ವೈದಿಕ ಕಾರ್ಯಗಳು ನಡೆದು, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಮಾ.17ರಂದು ಸಂಜೆ ದೈವಗಳ ಭಂಡಾರ ತೆಗೆಯುವುದು, ಶ್ರೀ ಉಳ್ಳಾಕುಲು, ಶ್ರೀ ಕುಮಾರ, ಮದಿಮಾಲು, ದೈವಗಳ ನೇಮೋತ್ಸವ ನಡೆಯಲಿದೆ. ಅದೇ ದಿನ ಬೆಳಿಗ್ಗೆ 9.00ರಿಂದ ವಿಷ್ಣುಮಂಗಲ ಶ್ರೀ ಧನ್ವಂತರಿ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ರಾತ್ರಿ ಗಂಟೆ 9:00ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ರುದ್ರಚಾಮುಂಡಿ,
ವ್ಯಾಘ್ರ ಚಾಮುಂಡಿ, ಮಲೆಚಾಮುಂಡಿ, ಕಲ್ಲುರ್ಟಿ ಪಂಜುರ್ಲಿ, ಕಲ್ಲುರ್ಟಿ, ವರ್ಣಾರ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ. ಮಾ. 18ರಂದು ಪೂ. ಗಂಟೆ 6:00ರಿಂದ ಪುರುಷರಾಯ, ಬೇಡವ ದೈವಗಳ ನೇಮೋತ್ಸವ, ಪೂ. ಗಂಟೆ 9:00 ರಿಂದ ಶ್ರೀ ಶಿರಾಡಿ
ರಾಜನ್ ದೈವದ ನೇಮೋತ್ಸವ, ಹರಿಕೆ ಕಾಣಿಕೆ, ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಮಾರಿಕಳಕ್ಕೆ ಹೋಗುವುದು ನಡೆಯಲಿದೆ.
ಅದ್ದೂರಿಯ ಸಿದ್ಧತೆ: ನೇಮೋತ್ಸವಕ್ಕೆ ಪೂರ್ವಭಾವಿಯಾಗಿ ಗ್ರಾಮಸ್ಥರು ವಿವಿಧ ಸಮಿತಿಗಳ ಮೂಲಕ ಆಮಂತ್ರಣ ಪತ್ರ ಹಂಚಿಕೆ, ದೈವಸ್ಥಾನದ ಸುತ್ತ ಶ್ರಮದಾನ ನಡೆಸಿದ್ದಾರೆ. ಕುಮನಮಾಳ್ಯ ಪರಿಸರವನ್ನು ವರ್ಣರಂಜಿತವಾಗಿ ಸಿಂಗರಿಸಿದ್ದಾರೆ. ಮಹಿಳೆಯರು ಸಮಿತಿಗಳ ಮೂಲಕ ಪರಿಸರ ಸ್ವಚ್ಛಗೊಳಿಸಿವ ಕಾರ್ಯ ಸೇರಿದಂತೆ ಎಲ್ಲಾ ರೀತಿಯ ಶ್ರಮದಾನ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.