ಕೊಡಗು ಸಂಪಾಜೆ ಗ್ರಾಮದ ಅರೆಕಲ್ಲು ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯು ಮಾ.10ರಿಂದ ಪ್ರಾರಂಭಗೊಂಡಿದ್ದು, ಮಾ.17ರವರೆಗೆ ವಿಜೃಂಭಣೆಯಿಂದ ನಡೆಯಿತು.

ಮಾ.10 ಕ್ಕೆ ಗಾಳಿಬೀಡಿನಿಂದ ಭಂಡಾರ ತರಲಾಗಿದ್ದು, ಮಾ.11ರಂದು ಭಂಡಾರ ಜಳಕ, 12ರಿಂದ 14 ರವರೆಗೆ ದೇವರ ದರ್ಶನ ಬಲಿ, ದೋಸೆ ಹೊಯ್ಯುವುದು, ಬಟ್ಟಲು ಕಾಣಿಕೆ , ವಿಶೇಷ ಸಂಕ್ರಮಣ ಪೂಜೆ , ಅಯ್ಯಪ್ಪ ಸ್ವಾಮಿಯ ಜಾತ್ರೋತ್ಸವ ನಡೆಯಿತು. ಮಾರ್ಚ್ 15 ರಂದು ಮಕ್ಕಳ ಫಲ ನೀಡುವುದು – ಹರಕೆ ಹಾಕುವುದು , ರಾತ್ರಿ ನೈಧಾಪಾಂಡಿ ದೈವದ ಕೋಲ, ಮಾರ್ಚ್ 16 ರಂದು ಪರಶುರಾಮನ ಪೂಜೆ ನಡೆಯಿತು. ಬಳಿಕ ಹರಕೆ ಕೋಲ ಪ್ರಸಾದ ವಿತರಣೆ ನಡೆಯಿತು. ಮಾರ್ಚ್ 17 ರಂದು ಗಾಳಿ ಬೀಡಿಗೆ ಭಂಡಾರ ಹೋಗಲಾಯಿತು. ಈ ಸಂದರ್ಭದಲ್ಲಿ ಊರ – ಪರವೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ದೇವರ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾದರು.