ಮಾ.19,20 : ಕಳಂಜ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ

0

ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ವತಿಯಿಂದ ವಿಷ್ಣುಮೂರ್ತಿ ಒತ್ತೆಕೋಲವು ಮಾ.19 ಮತ್ತು ಮಾ.20 ರಂದು ನಡೆಯಲಿದೆ.
ಮಾ.19 ರಂದು ಸಂಜೆ ಗಂಟೆ 6.00 ಕ್ಕೆ ಭಂಡಾರ ತೆಗೆಯುವುದು.ರಾತ್ರಿ ಗಂಟೆ 7.30 ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ ,ಗಂಟೆ 9.00 ಕ್ಕೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 11.00 ಕ್ಕೆ ಕುಳಿಚಟ್ಟು ನಡೆಯಲಿದೆ.


ಮಾ.20 ರಂದು ಪ್ರಾತ:ಕಾಲ ಗಂಟೆ 5.00 ಕ್ಕೆ ದೈವದ ಅಗ್ನಿ ಪ್ರವೇಶ,ಬೆಳಿಗ್ಗೆ ಗಂಟೆ 6.00 ಕ್ಕೆ ಮಾರಿಕಳ,ಗಂಟೆ 7.00 ಕ್ಕೆ ಪ್ರಸಾದ ವಿತರಣೆ ಗಂಟೆ 9.00 ಕ್ಕೆ ಗುಳಿಗ ದೈವದ ನೇಮ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮ
ಮಾ.19 ರಂದು ರಾತ್ರಿ ಗಂಟೆ 8.30 ರಿಂದ ಅಂಗನವಾಡಿ ಪುಟಾಣಿಗಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 1.30 ರಿಂದ ಯಕ್ಷರಂಗದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತುಳು ಯಕ್ಷಗಾನ ಬಯಲಾಟ “ಅಮರ್ ಬೊಳ್ಳಿಲು” ನಡೆಯಲಿದೆ.