ಸೋಮವಾರದಿಂದ ಜಬಳೆ ಮಾರ್ಗವಾಗಿ ಓಡಾಟ ಆರಂಭ
ಪುತ್ತೂರು-ಬೆಳ್ಳಾರೆ-ಪೈಲಾರು ಮಾರ್ಗವಾಗಿ ಸಂಚರಿಸುವ ಎರಡು ಸರಕಾರಿ ಬಸ್‌ಗಳು ಇನ್ನು ಪೈಲಾರು -ಜಬಳೆ ಮಾರ್ಗವಾಗಿ ಎಲಿಮಲೆಯವರೆಗೆ ವಿಸ್ತರಣೆಗೊಂಡಿದ್ದು, ಮಾ. 17 ರಿಂದ ಓಡಾಟ ಆರಂಭವಾಗಲಿದೆ.
ಪುತ್ತೂರಿನಿಂದ ಸಂಜೆ 5 ಗಂಟೆಗೆ ಪೆರ್ಲಂಪಾಡಿ ಬೆಳ್ಳಾರೆ ಮಾರ್ಗವಾಗಿ ಹೊರಡುವ ಮತ್ತು ಸಂಜೆ 6.45 ಕ್ಕೆ ತಿಂಗಳಾಡಿ- ಮಾಡಾವು-ಬೆಳ್ಳಾರೆ ಮಾರ್ಗವಾಗಿ ಹೊರಡುವ ಬಸ್‌ಗಳು ಈ ಮಾರ್ಗದಲ್ಲಿ ಬಂದು ಎಲಿಮಲೆಯಲ್ಲಿ ತಂಗಲಿದೆ.
ಎಲಿಮಲೆಯಿಂದ ಬೆಳಿಗ್ಗೆ 6.15 ಕ್ಕೆ ಬೆಳ್ಳಾರೆ ಮಾರ್ಗವಾಗಿ ಹಾಗೂ 6.45 ಕ್ಕೆ ಬೆಳ್ಳಾರೆ-ಪೆರ್ಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ಬಸ್ ಸಂಚರಿಸಲಿದೆ ಎಂದು ತಿಳಿದು ಬಂದಿದೆ.