ಮಂಡೆಕೋಲು: ಅಕ್ಷಯ ಸಂಜೀವಿನಿ ಒಕ್ಕೂಟದ ಮಹಾಸಭೆ

0

ಗ್ರಾಮ ಪಂಚಾಯತ್ ಮಂಡೆಕೋಲು ಅಕ್ಷಯ ಸಂಜೀವಿನಿ ಒಕ್ಕೂಟ ಮಂಡೆಕೋಲು ಇದರ ಆಶ್ರಯ ದಲ್ಲಿ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ‌ ಕಾರ್ಯ ಕ್ರಮವು ಮಾ.11 ರಂದು ಮಂಡೆಕೋಲು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯ ಕ್ರಮವನ್ನು ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ ಉದ್ಘಾಟಿಸಿದರು. ಅಕ್ಷಯ ‌ಸಂಜೀವಿನಿ ಒಕ್ಕೂಟ ದ ಅಧ್ಯಕ್ಷೆ ಸತ್ಯವತಿ ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ‌ ದಿವ್ಯಲತ ಗ್ರಾ.ಪಂ.ಸದಸ್ಯೆ,‌ ಗೀತಾ ಮಾವಂಜಿ ಗ್ರಾ.ಪಂ.ಸದಸ್ಯೆ, NRLM ವಲಯ ಮೇಲ್ವಿಚಾರಕರಾದ ಮಹೇಶ್, ರೂಪ NRLM ವಲಯ‌ ಮೇಲ್ವಿಚಾರಕ ಕೌಶಲ್ಯ, ಒಕ್ಕೂಟದ ಕಾರ್ಯದರ್ಶಿ ಪದ್ಮಿನಿ, ಕೋಶಾಧಿಕಾರಿ ಕುಸುಮ ಭಾಗವಹಿಸಿದ್ದರು. ಅಕ್ಷಯ ಸಂಜೀವಿನಿ ಒಕ್ಕೂಟ ನಡೆಸಿದ ವಿವಿಧ ಆಟೋಟ ಸ್ಪರ್ಧೆ ಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಒಕ್ಕೂಟ ಸದಸ್ಯೆಯರಾದ ವೀಣಾ ದೇವರಗುಂಡ ಮತ್ತು ಸುಶೀಲ ಪೇರಾಲು ಇವರ ಸ್ವಾವಲಂಬಿ ಜೀವನ ಸ್ವ ಉದ್ಯೋಗ ಸಾಧನೆಗೆ ಸನ್ಮಾನಿಸಲಾಯಿತು. ಸುಶೀಲ ಪೇರಾಲು ಪ್ರಾರ್ಥನೆ ಮಾಡಿದರು. ಸಾವಿತ್ರಿ ಕಣೆಮರಡ್ಕ ಸ್ವಾಗತಿಸಿ, ದಿವ್ಯಲತಾ ಚೌಟಾಜೆ ವಂದಿಸಿ, ರೇಷ್ಮಾ ದೇವರಗುಂಡ ಕಾರ್ಯಕ್ರಮ ನಿರೂಪನೆ ಮಾಡಿದರು.