Home Uncategorized ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸಿಲ್ವರ್ ಜೋನ್ ಫೌಂಡೇಶನ್ ಒಲಿಂಪ್ಯಾಡ್ಸ್ ಪರೀಕ್ಷೆಯ ಬಹುಮಾನ...

ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸಿಲ್ವರ್ ಜೋನ್ ಫೌಂಡೇಶನ್ ಒಲಿಂಪ್ಯಾಡ್ಸ್ ಪರೀಕ್ಷೆಯ ಬಹುಮಾನ ವಿತರಣೆ

0


ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ ಸಿಲ್ವರ್ ಜೋನ್ ಫೌಂಡೇಶನ್ ಒಲಿಂಪ್ಯಾಡ್ಸ್ ನ್ಯೂ ಡೆಲ್ಲಿ ಆಯೋಜಿಸಿರುವ ಇಂಟರ್ನ್ಯಾಷನಲ್ ಒಲಂಪಿಯಾಡ್ ಆಫ್ ಮ್ಯಾಥಮ್ಯಾಟಿಕ್ಸ್ ಪರೀಕ್ಷೆಯಲ್ಲಿ ಒಟ್ಟು 67 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅದರಲ್ಲಿ ನಾಲ್ಕು ವಿದ್ಯಾರ್ಥಿಗಳಾದ ರುತ್ವಿ ನವೀನ್ 1ನೇ ತರಗತಿ, ಸಮೃದ್ಧಿ ಎಸ್ 2ನೇ ತರಗತಿ, ವಿದ್ವಾನ್ ಆರ್. ದಾಸ್ 3ನೇ ತರಗತಿ, ಹಾಗೂ ಚರಿತ್ ಎಸ್ ಯು 4ನೇ ತರಗತಿ ಇವರು ಚಿನ್ನದ ಪದಕಗಳನ್ನು ಪಡೆದುಕೊಂಡಿರುತ್ತಾರೆ, ಮೂರು ವಿದ್ಯಾರ್ಥಿಗಳಾದ ಪ್ರಮಯ್ ಕೃಷ್ಣ ಕೆ ಪಿ 1ನೇ ತರಗತಿ, ಪೂರ್ವಿ ಕೆ 2ನೇ ತರಗತಿ, ಪ್ರಮಿತ್ ಬಿ ಎ 3ನೇ ತರಗತಿ, ಇವರು ಬೆಳ್ಳಿ ಪದಕಗಳನ್ನು ಪಡೆದುಕೊಂಡಿರುತ್ತಾರೆ, ಮತ್ತು ಮೂರು ವಿದ್ಯಾರ್ಥಿಗಳಾದ ಹಯಾನ್ ಸಿ ಟಿ 1ನೇ ತರಗತಿ, ಮುಹಮ್ಮದ್ ಅಫೀಝ್ ಪಿ ಆರ್ 1ನೇ ತರಗತಿ, ಎ ಧನುಷ್ಯ 2ನೇ ತರಗತಿ, ಇವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.


ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್ ರವರು ವಿದ್ಯಾರ್ಥಿಗಳಿಗೆ ಪದಕವನ್ನು ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ , ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

NO COMMENTS

error: Content is protected !!
Breaking