ಸ್ತ್ರೀ ರೋಗ ತಜ್ಞೆ ಡಾ.ಅಮಿತಾ ಜೆ ಕುಡೆಕಲ್ಲು ಸೇವೆಗೆ ಲಭ್ಯ
ಸುಳ್ಯ ಗಾಂಧಿನಗರ ಭಾರತ್ ಮೆಡಿಕಲ್ ಬಳಿ ಸ್ತ್ರೀ ರೋಗ ತಜ್ಞರಾದ ಡಾ.ಅಮಿತಾ ಜೆ ಕುಡೆಕಲ್ಲು ರವರು ಅಮಿತಾ ಕ್ಲಿನಿಕ್ ಪ್ರಾರಂಭಿಸಿದ್ದಾರೆ.
ಕಳೆದ ಮೂವತೈದು ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು
ಇಪ್ಪತ್ತು ವರ್ಷಗಳ ಕಾಲ ದುಬೈ ಮತ್ತು ಸೌದಿಅರೇಬಿಯಾದಲ್ಲಿ ಗಲ್ಫ್ ಅರೋಗ್ಯ ಸಚಿವಾಲಯದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಕುಶಾಲನಗರದಲ್ಲಿ ಸ್ವತಃ ಕ್ಲಿನಿಕ್ ನಲ್ಲಿ ವೈದ್ಯರಾಗಿ ಸೇವೆ ನೀಡುತ್ತಿದ್ದರು.
ಸುಳ್ಯದಲ್ಲಿ ಪ್ರಾರಂಭಗೊಂಡ ಕ್ಲಿನಿಕ್ ನಲ್ಲಿ ಪ್ರಸವ ಪೂರ್ವ ಮತ್ತು ಪ್ರಸವ ನಂತರದ ತಪಾಸಣೆ,ಸಲಹೆ,ಸ್ತ್ರೀರೋಗ ಸಮಸ್ಯೆಗಳಿಗೆ ಸಲಹೆ ಮತ್ತು ಸಂದರ್ಶನ ಹಾಗೂ ಗರ್ಭಿಣಿಯರಿಗೆ ಹಾಗೂ ಸ್ತ್ರೀರೋಗ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಕ್ಯಾನಿಂಗ್ ವ್ಯವಸ್ಥೆಯೂ ಇದೆ ಎಂದವರು ತಿಳಿಸಿದ್ದಾರೆ.
ವೈದ್ಯರು ಸೋಮವಾರ ದಿಂದ ಶುಕ್ರವಾರದ ವರೆಗೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಕ್ಲಿನಿಕ್ ನಲ್ಲಿ ಲಭ್ಯರಿರುತ್ತಾರೆ.
ಇವರು ಸುಳ್ಯ ಆಲೆಟ್ಟಿ ಗ್ರಾಮದ ಕುಡೆಕಲ್ಲು ದಿ|ಜವಾಹರ್ ಕುಡೆಕಲ್ಲು ರವರ ಪತ್ನಿ . ಇವರ ಪುತ್ರ ಅಭಿಷೇಕ್ ಜವಾಹರ್ ಬೆಂಗಳೂರಿನ ಉದ್ಯಮಿಯಾಗಿದ್ದಾರೆ.ಮಗಳು ರಮ್ಯ ಜವಾಹರ್ ಅಮೆರಿಕಾದ ನ್ಯೂಯಾರ್ಕ್ ಸಿಟಿಯಲ್ಲಿ ಮಾನವ ಹಕ್ಕುಗಳ ಅಯೋಗ ಮತ್ತು ಅಂತರಾಷ್ಟ್ರೀಯ ಕಾನೂನು ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.