ಇತರ ವಾಹನಗಳ ಸಂಚಾರಕ್ಕೆ ಹರಸಾಹಸ ಪಡುವ ಚಾಲಕರು
ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಸುಳ್ಯ ಸೆಂಟರ್ ಪಕ್ಕದಲ್ಲಿ ಹಾದು ಹೋಗುವ ರಸ್ತೆಯಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲಿಸಿದ್ದು ಇದರಿಂದ ಈ ರಸ್ತೆಯಲ್ಲಿ ಹೋಗುವ ಬೇರೆ ವಾಹನಗಳಿಗೆ ಸಮಸ್ಯೆ ಉಂಟಾಗುತ್ತಿದೆ.

ಅಲ್ಲದೆ ಈ ರಸ್ತೆಯು ಡಾಮರೀಕರಣ ಅಥವಾ ಕಾಂಕ್ರೀಟೀಕರಣ ಇಲ್ಲದೆ ಹೊಂಡ ಗುಂಡಿಗಳಿಂದ ತುಂಬಿದೆ .
ಇರುವ ರಸ್ತೆಯ ಉದ್ದಕ್ಕೂ ಕಾರು ಇನ್ನಿತರ ವಾಹನಗಳನ್ನು ನಿಲ್ಲಿಸಲಾಗಿತಿದ್ದು ಬೇರೆ ವಾಹನಗಳಿಗೆ ಈ ರಸ್ತೆ ಯಲ್ಲಿ ಸಂಚರಿಸಲು ಚಾಲಕರು ಹರ ಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಭಾಗದ ರಸ್ತೆಯ ಅಭಿವೃದ್ಧಿಗೆ ಸಾರ್ವಜನಿಕರು ಕಳೆದ ಹಲವಾರು ಸಮಯ ಗಳಿಂದ ಆಗ್ರಹ ವ್ಯಕ್ತ ಪಡಿಸುತ್ತಾ ಬಂದಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.