ಕೆವಿಜಿ ಕಾನೂನು ಕಾಲೇಜಿನಲ್ಲಿ ಅಂತಾರಾಷ್ಟ್ರೀ ಯ ಗ್ರಾಹಕರ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮಾ. 15 ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಕಾನೂನು ಕಾಲೇಜಿನ ಆಡಳಿತಧಿಕಾರಿ ಪ್ರೊ. ಕೆ ವಿ ದಾಮೋದರ ಗೌಡ ಕಾರ್ಯಕ್ರಮದ ಕುರಿತು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ದಳ ಸುಬ್ರಯ ಭಟ್ ಗ್ರಾಹಕರ ಹಿತರಕ್ಷಣ ಕಾಯ್ದೆ ಗಳ ಪ್ರಕಾರ ಗ್ರಾಹರ ಹಕ್ಕುಗಳ ಕುರಿತುವಿಶೇಷ ಉಪನ್ಯಾಸ ನೀಡಿದರು.ಕಾಲೇಜಿನ ಪ್ರಾoಶುಪಾಲರಾದ ಡಾ ಉದಯಕೃಷ್ಣ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ಉಪನ್ಯಾಸಕಿ ಉಷಾ ಸಿ ಶೆಟ್ಟಿ, ಭೋದಕ, ಭೋದಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಆಶಿಕಾ, ಹಂಸಿನಿ, ಪೂರ್ಣಿಮಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಕೃಷ್ಣವೇಣಿ ಸ್ವಾಗತಿಸಿ ದರ್ಶಿನಿ ವಂದಿಸಿದರು. ವಿದ್ಯಾರ್ಥಿನಿ ಅನುಷ್ಯ ಕಾರ್ಯಕ್ರಮ ನಿರೂಪಿಸಿದರು.