ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಾಲಯದ ಈಶಾನ್ಯ ದಿಕ್ಕಿನ ಅನತಿದೂರದಲ್ಲಿರುವ ಆಲಿಂಗಾಲ್ ಶ್ರೀ ವಿಷ್ಣುಮೂರ್ತಿ ದೈವದ ಕಟ್ಟೆಯು ಅತ್ಯಂತ ಕಾರಣೀಕ ಉಳ್ಳ ಸಾನಿಧ್ಯವಾಗಿ ನೆಲೆಗೊಂಡಿದ್ದು, ವರ್ಷಾವಧಿ ಜಾತ್ರೆ ಕಳೆದು ಮೂರನೇ ದಿನ ವಿಷ್ಣುಮೂರ್ತಿ ದೈವದಕೊಲವು ನಡೆಯುತ್ತದೆ.
ಇದೇ ಸ್ಥಳದಲ್ಲಿ ಪೂರ್ವಕಾಲದಲ್ಲಿ ಪ್ರತಿವರ್ಷ ಜರಗುತ್ತಿದ್ದ ಒತ್ತೆಕೊಲವು ಆಧುನಿಕ ಕಾಲಚಕ್ರಕ್ಕನುಗುಣ ವಾಗಿ ಇತ್ತೀಚೆಗೆ ಒಂದು ದಶಕಗಳಿಂದ ಮೂರು ವರ್ಷಗಳಿಗೊಮ್ಮೆ ಒತ್ತೆಕೋಲ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಈ ವರ್ಷ ಇಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರ ಮಗಳೊಂದಿಗೆ ನಡೆಯಲಿದೆ.
ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯಾಪ್ತಿಗೆ ಹಾಗೂ ಆಡಳಿತಕ್ಕೆ ಒಳಪಟ್ಟಿ ರುವ ಶ್ರೀ ವಿಷ್ಣುಮೂರ್ತಿ ಒತ್ತೆ ಕೋಲ ಮಹೋತ್ಸವವು ಕ್ಷೇತ್ರ ಆಡಳಿತ ಸಮಿತಿಯ ನೇತೃತ್ವದಲ್ಲಿ ನಡೆಯುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬೊಡ್ಡನಕೊಚ್ಚಿ ತಿಳಿಸಿದ್ದಾರೆ.