ಗೂನಡ್ಕ ರೇಬಿಸ್ ಕಾಯಿಲೆಯಿಂದ ಮಹಿಳೆ‌ ಮೃತ್ಯು

0

ಸಂಪಾಜೆ ಗ್ರಾಮದ ಗೂನಡ್ಕ ಬಳಿಯ ನಿವಾಸಿ ಬೇಬಿ ಎಂಬವರು ರೇಬಿಸ್ ಕಾಯಿಲೆಯಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮಾ. ೨೦ರಂದು ನಿಧನರಾದರು.

ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಬೇಬಿಯವರಿಗೆ ಕೆಲ ದಿನಗಳ ಹಿಂದೆ ನಾಯಿಮರಿಯೊಂದು ಕಚ್ಚಿದ್ದು, ಸ್ವಲ್ಪ ದಿನಗಳ ನಂತರ ಹೊಟ್ಟೆ ನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ಹೊಟ್ಟೆನೋವು ಉಲ್ಭಣಗೊಂಡಾಗ ವೈದ್ಯರ ಸಲಹೆ ಮೇರೆಗೆ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ರೇಬಿಸ್ ಕಾಯಿಲೆ ಇರುವುದು ದೃಢಪಟ್ಟಿತ್ತು. ಮಾ. ೨೦ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟರೆಂದು ತಿಳಿದು ಬಂದಿದೆ.
ಮಾ.೨೧ ರಂದು ಇವರ ಮೃತದೇಹವನ್ನು ಗೂನಡ್ಕ ಮನೆಗೆ ತಂದು ಅಂತ್ಯಸಂಸ್ಕಾರ ನಡೆಸಲಾಯಿತು. ಇವರಿಗೆ ೫೦ ವರ್ಷ ವಯಸ್ಸಾಗಿತ್ತು. ಮೃತರು ಪತಿ ಪಿಜಿನ, ಪುತ್ರರಾದ ಶಶಿಧರ, ಅಭಿಷೇಕ್, ಪುತ್ರಿ ಉಷಾರನ್ನು, ಬಂಧುಗಳನ್ನು ಅಗಲಿದ್ದಾರೆ.