ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಕುರುಂಜಿ ಬಾಗ್ ನಲ್ಲಿ ನಿರ್ಮಿಸಿದ ಸುಸಜ್ಜಿತಾ ಜೈ ಜವಾನ್ ಆಟೋರಿಕ್ಷಾ ನಿಲ್ದಾಣವನ್ನು ಇಂದು ಲಯನ್ ಜಿಲ್ಲೆ 317- ಡಿ ಇದರ ರಾಜ್ಯಪಾಲರಾದ ಲಯನ್ ಭಾರತಿ ಬಿ.ಎಂ. ಉದ್ಘಾಟಿಸಿದರು.
ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್. ಪ್ರಥಮವಾಗಿ ರಿಕ್ಷಾ ಚಾಲನೆ ಮಾಡಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಾಮಕೃಷ್ಣ ರೈ, ಕಾರ್ಯದರ್ಶಿ ಲಯನ್ ರಾಮಚಂದ್ರ ಪಲ್ಲತಡ್ಕ, ಖಜಾಂಜಿ ಲಯನ್ ರಮೇಶ್ ಶೆಟ್ಟಿ, ಯೋಜನೆಯ ನಿರ್ದೇಶಕ ಲಯನ್ ರಂಗನಾಥ ಪಿ.ಎಂ,ಲಯನ್ ಆನಂದ ಪೂಜಾರಿ, ಬಿ.ಎಂ.ಎಸ್ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ನಾರಾಯಣ ಎಸ್.ಎಂ, ಖಜಾಂಜಿ ನಿತ್ಯಾನಂದ
ಮತ್ತು ಲಯನ್ಸ್ ಕ್ಲಬ್ ಸದಸ್ಯರು, ಅಟೋ ಚಾಲಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಲಯನ್ ಹರೀಶ್ ರೈ ಉಬರಡ್ಕ ರವರಿಂದ ದಿ.ನಾರಾಯಣ ರೈ ಸ್ಮರಣಾರ್ಥವಾಗಿ ಕುರುಂಜಿಭಾಗ್ ನಿಲ್ದಾಣದ ಎಲ್ಲಾ ಅಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು.