ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾ ಸ್ವಾಮೀಜಿ ಸುಳ್ಯ ಭೇಟಿ

0

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ, ಶ್ರೀಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಪುರ ಮಠದ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಶನಿವಾರ ಸುಳ್ಯಕ್ಕೆ ಭೇಟಿ ನೀಡಿದರು.


ಸುಳ್ಯದ ಶಿವಕೃಪಾ ಕಲಾಮಂದಿರಕ್ಕೆ ಆಗಮಿಸಿದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಶಿವಕೃಪಾ ಕಲಾಮಂದಿರದ ಮಾಲಕರಾದ ಹರೀಶ್ ದಂಪತಿಗಳು ಪಾದಪೂಜೆ ನಡೆಸಿ ಬರಮಾಡಿಕೊಂಡರು. ಪಾಲ್ಗೊಂಡಿದ್ದ ಭಕ್ತರು ಶ್ರೀಗಳಿಂದ ಆಶೀರ್ವಾದ ಪಡೆದು ಮಂತ್ರಾಕ್ಷತೆ ಸ್ವೀಕರಿಸಿದರು. ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಸರ್ವರನ್ನೂ ಆಶೀರ್ವದಿಸಿ, ಹರಸಿದರು.


ಮುಳ್ಳೇರಿಯಾ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡವು, ಮಂಡಲ ಗುರಿಕ್ಕಾರ ಸತ್ಯನಾರಾಯಣ ಮೊಗ್ರ, ವಿ.ವಿ.ವಿ. ಪ್ರಧಾನ ಕಾರ್ಯದರ್ಶಿ ಈಶ್ವರ ಕುಮಾರ್ ಭಟ್, ವಲಯ ಪದಾಧಿಕಾರಿಗಳು, ಪದ್ಮಶ್ರೀ ಪುರಸ್ಕೃತ ಗಿರೀಶ ಭಾರದ್ವಾಜ, ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯ ಪಾಲೆಪ್ಪಾಡಿ, ಕಾರ್ಯದರ್ಶಿ ಕೃಷ್ಣರಾವ್ ನಾವೂರು, ಪಾಲಚಂದ್ರ ವೈ.ವಿ., ಗಂಗಾಧರ ಮಟ್ಟಿ, ಪುರೋಹಿತ ನಾಗರಾಜ ಭಟ್, ಹೊಸನಗರ ಚಂದ್ರಮೌಳೇಶ್ವರ ದೇವಸ್ಥಾನದ ಪ್ರಕಲ್ಪ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಪರಿಯಪ್ಪು, ಧರ್ಮಾರಣ್ಯ ಅಭಿವೃದ್ಧಿ ಸಮಿತಿ ಸದಸ್ಯರು, ಜೇಡ್ಯ ಗೋಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಡಾ.ಪ್ರಕಾಶ್ ರಾವ್ ಸೇರಿದಂತೆ ಪ್ರಮುಖರು, ಭಕ್ತರು, ಶಿಷ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.