ಸಾಧಕರಿಗೆ ಸನ್ಮಾನ – ಆರೋಗ್ಯ ಮಾಹಿತಿ ಕಾರ್ಯಕ್ರಮ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ಇದರ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಾ.22 ರಂದು ಸುಳ್ಯ ದ ಸಿ. ಎ. ಬ್ಯಾಂಕ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಶಶಿಕಲಾ ಹರಪ್ರಸಾದ್ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಸರಕಾರಿ ನೌಕರರಾದ
ಶ್ರೀಮತಿ ತೀರ್ಥ ಆನಂದ ಗೌಡ ದಂಪತಿ ನರಿಯೂರು ಇವರು ನೆರವೇರಿಸಿದರು.
ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ,
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ
ಜತೆಕಾರ್ಯದರ್ಶಿ
ಶ್ರೀಮತಿ ರೂಪಲೇಖಾ ಹರಿಕೃಷ್ಣ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಶ್ರೀಮತಿ ಸುಜಾತಾ ಬಿ. ರಾವ್ ಉಬರಡ್ಕ, ನಾಟಿವೈದ್ಯ ಗುತ್ತಿಗಾರಿನ ಗುಡ್ಡೆ ಶ್ರೀಮತಿ ಇಂದಿರಾ ಬೋಜಪ್ಪ ಗುಡ್ಡೆ ಇವರನ್ನು ಸನ್ಮಾನಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ರಿತಾಯು ಕ್ಲಿನಿಕ್ ನ ಆಯುರ್ವೇದ ವೈದ್ಯರಾದ ಡಾ। ರೋಹಿಣಿ ಭಾರದ್ವಾಜ್ ಆಯುರ್ವೇದ ಜೌಷಧಿ ಯ ಬಗ್ಗೆ ಮಾಹಿತಿ ನೀಡಿ, ಮನೆಯಲ್ಲಿ ಅಡುಗೆಗೆ ಉಪಯೋಗಿಸುವ ಪ್ರತಿಯೊಂದು ವಸ್ತುವಿನಲ್ಲಿ ಔಷಧೀಯ ಗುಣವಿದೆ.ಮನೆಯ ಪಕ್ಕದಲ್ಲೇ ಇರುವ ಅನೇಕ ಜೌಷಧಿ ಗಿಡಗಳನ್ನು ಬೆಳೆಸಿ ಆ ಗಿಡಗಳಿಂದ ಉಪಯೋಗಿಸುವ ಔಷಧಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.ಸಭಿಕರ ಆರೋಗ್ಯ ಸಮಸ್ಯೆಗಳಿಗೆ ಮತ್ತು ಪ್ರಶ್ನೆಗಳಿಗೆ ಉತ್ತರಿಸಿದರು.ಈ ಸಂದರ್ಭದಲ್ಲಿ
ಮಹಿಳೆಯರಿಗಾಗಿ ಮೆಹಂದಿ ಹಚ್ಚುವುದು, ಕೇಶ ವಿನ್ಯಾಸ, ಸಾಂಪ್ರದಾಯಿಕ ಉಡುಗೆ,
ಸೀರೆಯ ನಿಖರ ಬೆಲೆ ಹೇಳಿ ಪಡಕೊಳ್ಳುವುದು ಸ್ಪರ್ಧೆ ಏರ್ಪಡಿಸಲಾಯಿತು.
ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಶ್ರೀಮತಿ ಲೋಲಾಕ್ಷಿ ದಾಸನಕಜೆ ಸ್ವಾಗತಿಸಿ,
ಶ್ರೀಮತಿ ರವಿಕಲಾ ಚೆಮ್ನೂರು ಪ್ರಾರ್ಥಿಸಿ, ಶ್ರೀಮತಿ ಗುಣವತಿ ಕೊಲ್ಲಂತಡ್ಕ ವಂದಿಸಿದರು.
ಶ್ರೀಮತಿ ಪುಷ್ಪ ಮೇದಪ್ಪ ಉಳುವಾರು ಕಾರ್ಯಕ್ರಮ ನಿರೂಪಿಸಿದರು.