ಭ್ರಷ್ಟಾಚಾರದ ಪರಮಾವಧಿಯ ಯೋಜನೆ, ಕಾಡು ನಾಶಕ್ಕೆ ರಹದಾರಿ
ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ
ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಸುಬ್ರಹ್ಮಣ್ಯದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆದಿದ್ದು ಅರಣ್ಯ ಸಚಿವರ ಆದೇಶದಂತೆ ಅರಣ್ಯದೊಳಗೆ ಕೊಳವೆ ಬಾವಿ ಕೊರೆದು, ಕೆರೆ ಮಾಡಿ ಅದಕ್ಕೆ ನೀರು ತುಂಬಿ ಕಾಡು ಪ್ರಾಣಿಗಳಿಗೆ ನೀರುಣಿಸುವ ಯೋಜನೆ ಜಾರಿಗೊಳಿಸಲು ಸುತ್ತೋಲೆ ಹೊರ ಬಿದ್ದಿದ್ದು ಇದು ಭ್ರಷ್ಟಾಚಾರದ ಪರಮಾವಧಿ ಎಂದು ಮಲೆನಾಡು ಹಿತರಕ್ಷಣಾ ವೇದಿಕೆ ಆರೋಪಿಸಿದೆ.

ಕಾಡಿನಲ್ಲಿ ಬೇಕಾದ ನೀರಿನ ಮೂಲಗಳು ಈಗಲೂ ಇದೆ. ಆದರೆ ಈಗ ರಾಜ್ಯ ಸರ್ಕಾರದ ಅರಣ್ಯ ಸಚಿವರು ಕಾಡಿನೊಳಗೆ ಭಾವಿ ತೋಡಿ ಪ್ರಾಣಿಗಳಿಗೆ ನೀರುಣಿಸುವ ಯೋಜನೆ ಹಾಕಿ ಆದೇಶ ಹೊರಡಿಸಿದ್ದು ಇದು ಇದರೊಂದಿಗೆ ಭ್ರಷ್ಟಾಚಾರ ನಡೆಸಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಆ ಮೂಲಕ ಅಕ್ರಮ ಎಸೆಯಲು ರಹದಾರಿ ನಿರ್ಮಿಸುತ್ತಿದೆ. ತಕ್ಷಣ ಈ ಸುತ್ತೋಲೆ ಹಿಂಪಡೆಯಬೇಕು ಎಂದು ಮಲೆನಾಡು ಹಿತ ರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ ಆಗ್ರಹಿಸಿದ್ದಾರೆ.
ಇದು ಜಾರಿಯಾದರೆ ನಾವು ಉಗ್ರ ಹೋರಾಟ ಮಾಡುತ್ತೇವೆ, ಕಾಡಿಗೆ ಯಂತ್ರ ನುಗ್ಗಿದರೆ ನಾವು ಅದನ್ನು ತೆಡೆಯಲು ಸಿದ್ದ ಎಂದವರು ಘೋಷಿಸಿದ್ದಾರೆ.
ಈ ಯೋಜನೆ ಮಂತ್ರಿಗಳು, ಅಧಿಕಾರಿಗಳು ಹಣ ಮಾಡುವ ದಂದೆ ನಡೆಸುವ ಉದ್ದೇಶದಿಂದ ಯೋಜನೆ ರೂಪಿಸಿ ಹಣ ಮಾಡಲು ಮುಂದಾಗಿರುವುದಾಗಿ ಆರೋಪಿಸಿದ್ದಾರೆ.
ಕೊಳವೆ ಬಾವಿ ತೋಡಲು ಬೋರ್ ವೆಲ್ ವಾಹನ ಕಾಡಿನೊಳಗೆ ಹೋಗಬೇಕು, ಹಿಟಾಚಿ, ಜೆಸಿಬಿ ರಸ್ತೆ ಮಾಡಲು, ಬಾವಿ ತೆಗೆಯಲು ಬೇಕು. ಸೋಲಾರ್ ಅಳವಡಿಸಿ ಪಂಪ್ ಗೆ ವಿದ್ಯುತ್ ವ್ಯವಸ್ಥೆ ಮಾಡಬೇಕು ಪ್ರತಿ ವರ್ಷ ಮೈಂಟೈನ್ಸ್ ಇದೆ. ಇದೆಲ್ಲಾ ಆಗುವಾಗ ಕಾಡು ನಾಶ ನಿಶ್ಚಿತ. ಬೋರ್ ನವರ ಅಥವಾ ಸೋಲಾರ್ ನ ಲಾಭಿಯಿಂದಾಗಿ ಈ ಯೋಜನೆ ಜಾರಿಯಾಗಲಿದೆ ಎಂದ ಅವರು. ಜನ ವಸತಿಗಿಂತ ದೂರದಲ್ಲಿ ಕಾಡಿನ ಮಧ್ಯೆ ಇದಾಗಬೇಕಾಗಿದೆ. ಡೋಂಗಿ ಅರಣ್ಯ ಸಚಿವರು, ಪರಿಸರ ಸಂರಕ್ಷಣೆ ಮಾತು ಹೇಳುವ ನೆಪದಲ್ಲಿ ಸಚಿವರು ಕಾಡಿನ ನಾಶ ಪಡಿಸುವ ಯೋಜನೆ ಇದಾಗಿದೆ ಎಂದರು. ಕಾಡಿನ ಪ್ರಾಣಿಯನ್ನು ಸಾಕು ಪ್ತಾಣಿಗಳ ಮಾದರಿಯಲ್ಲಿ ಸಾಕಬಾರದು. ಎಂದವರು ನುಡಿದರು. ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಜಯಪ್ರಕಾಶ್ ಕೂಜುಗೋಡು, ಅಚ್ಚುತ ಗೌಡ ಸುಬ್ರಹ್ಮಣ್ಯ, ಚಂದ್ರಶೇಖರ ಬಾಳುಗೋಡು, ರಮಾನಂದ ಎಣ್ಣೆಮಜಲು, ಅಶೋಕ್ ಸುಬ್ರಹ್ಮಣ್ಯ, ದೀಕ್ಷಿತ್ ನಡುಗಲ್ಲು,, ರಾಜೇಶ್ ಶಿರಾಡಿ ಮತ್ತಿತರರು ಉಪಸ್ಥಿತರಿದ್ದರು.