ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಕಾಂಕ್ರೀಟ್ ರಸ್ತೆಯಲ್ಲಿ ಮಳೆಗೆ ಮಣ್ಣು ಕೊಚ್ಚಿಕೊಂಡು ಬಂದು ರಸ್ತೆ ಕೆಸರುಮಯವಾಗಿತ್ತು.
ಪ್ರಥಮವಾಗಿ ಸುರಿದ ಮಳೆಗೆ ಕಾಂಕ್ರೀಟ್ ರಸ್ತೆಗೆ ಮಣ್ಣು ಕೊಚ್ಚಿಕೊಂಡು ಬಂದು ರಸ್ತೆ ಕೆಸರುಮಯವಾದ ಪರುಣಾಮ ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು.



ಇದನ್ನು ಅರಿತ ಶಾಂತರಾಮ ಕಣಿಲೆಗುಂಡಿಯವರು ಜೆಸಿಬಿ ತರಿಸಿ ರಸ್ತೆ ಮೇಲೆ ಬಂದು ನಿಂತಿದ್ದ ಮಣ್ಣನ್ನು ತೆರವುಗೊಳಿಸಿರುವುದಾಗಿ ತಿಳಿದು ಬಂದಿದೆ.
ರಸ್ತೆ ಬದಿ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕೆಲಸ ನಡೆದಿದ್ದು ರಸ್ತೆಯಿಡಿ ಮಣ್ಣು ಆವರಿಸಿದ ಕಾರಣ ರಸ್ತೆ ಕೆಸರುಮಯವಾಗಿರುವುದಾಗಿ ತಿಳಿದು ಬಂದಿದೆ.