ಸುಳ್ಯ ಚೆನ್ನಕೇಶವ ದೇವಸ್ಥಾನ ಮುಂಭಾಗ ಆಯೋಜನೆ

ಸುಳ್ಯ ಕಬಡ್ಡಿ ಉತ್ಸವ – ೨೦೨೫ ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಶಿಯೇಶನ್, ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಶಿಯೇಶನ್ ಹಾಗೂ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಶಿಯೇಶನ್ ಇದರ ಸಹಭಾಗಿತ್ವದಲ್ಲಿ ಅಂತರಾಜ್ಯ ಮಟ್ಟದ ಎಂಟು ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ಪುರುಷರ ಪ್ರೊ ಮಾದರಿಯ ಕಬಡ್ಡಿ ಪಂದ್ಯಾಟವು ಮಾ.೨೯ರಂದು ಶನಿವಾರ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮೈದಾನದಲ್ಲಿ ನಡೆಯಲಿದೆ.
೮ ತಂಡಗಳು: ಪಂದ್ಯಾಟದಲ್ಲಿ ಎನ್.ಎಂ.ಸಿ. ಸುಳ್ಯ, ಆಳ್ವಾಸ್, ಎಸ್.ಡಿ.ಎಂ. ಉಜಿರೆ, ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಕಾಪಿಕಾಡ್ ಉಳ್ಳಾಲ, ವಿದ್ಯಾಂಜನೆಯ ಉಳ್ಳಾಲ, ಕೆರೆಂಕಿ, ನೆಲಮಂಗಲ ಬೆಂಗಳೂರು, ಷರಾ ಫೌಂಡೇಶನ್ ತಂಡಗಳು ಭಾಗವಹಿಸಲಿವೆ. ಲೀಗ್ ಮಾದರಿಯ ಪಂದ್ಯಾಟ ಇದಾಗಿದ್ದು ಮಧ್ಯಾಹ್ನ ೨ ಗಂಟೆಯಿಂದ ಪಂದ್ಯಾಟಗಳು ಆರಂಭಗೊಳ್ಳುವುದು. ಪ್ರೇಕ್ಷಕರಿಗೆ ಪ್ರವೇಶ ಉಚಿತವಾಗಿದ್ದು, ಸಾವಿರಾರು ಮಂದಿ ಪಂದ್ಯಾಟ ವೀಕ್ಷಣೆಗೆ ಆಗಮಿಸುವುದರಿಂದ ಈಗಾಗಲೇ ಚೆನ್ನಕೇಶವ ದೇವಸ್ಥಾನದ ಪಕ್ಕದ ಮೈದಾನದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.




ಬಹುಮಾನ: ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ.೬೦ ಸಾವಿರ, ದ್ವಿತೀಯ ತಂಡಕ್ಕೆ ೪೦ ಸಾವಿರ ಹಾಗೂ ತೃತೀಯ ಮತ್ತು ಚತುರ್ಥ ಸ್ಥಾನ ಪಡೆದ ತಂಡಗಳಿಗೆ ತಲಾ ೨೫ ಸಾವಿರ ರೂ. ನಗದು ಹಾಗೂ ಶಾಶ್ವತ ಫಲಕವನ್ನು ನೀಡಲಾಗುತ್ತಿದೆ ಎಂದು ಕಬಡ್ಡಿ ಉತ್ಸವ ಸಮಿತಿ ಗೌರವಾಧ್ಯಕ್ಷ ಅಕ್ಷಯ್ ಕೆ.ಸಿ. ಹಾಗೂ ಅಧ್ಯಕ್ಷ ಡಾ. ಲೀಲಾಧರ್ ಡಿ.ವಿ.ಯವರು ತಿಳಿಸಿದ್ದಾರೆ.
ಉದ್ಘಾಟನೆ: ಸಂಜೆ ಪಂದ್ಯಾಟದ ಉದ್ಘಾಟನೆ ನಡೆಯಲಿದ್ದು ಶಾಸಕಿ ಭಾಗೀರಥಿ ಮುರುಳ್ಯ ಪಂದ್ಯಾಟವನ್ನು
ಉದ್ಘಾಟಿಸಲಿದ್ದಾರೆ.
ಕಬಡ್ಡಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಅಕ್ಷಯ್ ಕೆ.ಸಿ.ಯವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ರಾಷ್ಟ್ರೀಯ ಕಬಡ್ಡಿ ಆಟಗಾರರಾದ ಪ್ರಶಾಂತ್ ರೈ ಕೈಕಾರ ಹಾಗೂ ಗಗನ್ ಗೌಡ ಅಂಕಣಕ್ಕೆ ಚಾಲನೆ ನೀಡುವರು. ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಚಯರ್‌ಮೆನ್ ರಾಕೇಶ್ ಮಲ್ಲಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಮಂದಿ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸನ್ಮಾನ : ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಕಬಡ್ಡಿ ಆಟಗಾರರಾದ ಅಭಿಷೇಕ್ ಗೌಡ ಹಾಗೂ ರತನ್ ಭಟ್ಕಳ್ ರನ್ನು ಸನ್ಮಾನಿಸಲಾಗುತ್ತದೆ.







