ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಕುಮಾರಧಾರ ಸೇತುವೆಯ ಇಕ್ಕೆಲಗಳಲ್ಲಿ ತ್ಯಾಜ್ಯ ಎಸೆಯದಂತೆ 6 ಸೂಚನಾ ಫಲಕ ಇಂದು ಅಳವಡಿಸಲಾಯಿತು.
ಈ ಸೂಚನಾ ಫಲಕವನ್ನು ಕೊಡುಗೆಯಾಗಿ ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸ್ವಾಮಿ ಸನ್ನಿಧಿ ಪೂಜಾ ಸಾಮಗ್ರಿಗಳ ಹಾಗೂ ವಿಗ್ರಹಗಳ ಮಳಿಗೆ ನೀಡಿತು.



ಫಲಕ ಅನಾವರಣ ಸಂದರ್ಭ ಸುಬ್ರಹ್ಮಣ್ಯ ಗ್ರಾ. ಪಂ ಅಧ್ಯಕ್ಷರಾದ ಸುಜಾತ ಕಲ್ಲಾಜೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಜಿ.ಎನ್, ಸುಬ್ರಹ್ಮಣ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಾರ್ತಿಕ್, ಪಿಡಬ್ಲ್ಯೂಡಿ ಇಂಜಿನಿಯರ್ ಪ್ರಮೋದ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ ಇಂಜಾಡಿ, , ಹೆಚ್.ಎಲ್.ವೆಂಕಟೇಶ್, ಸೌಮ್ಯ ಕುಕ್ಕೆ ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ ಸದಸ್ಯರಾದ ಲೋಲಾಕ್ಷ ಕೈಕಂಬ, ಪವನ್ ಸುಬ್ರಮಣ್ಯ,
ಐರವೀಂದ್ರ ಕುಮಾರ್ ರುದ್ರಪಾದ, ರತ್ನಕುಮಾರಿ ನೂಚಿಲ, ಸಮಾಜಸೇವಕ ಡಾ|ರವಿಕಕ್ಕೆ ಪದವು,ಪಂಚಾಯತ್ ಸಿಬ್ಬಂದಿ ,ಸ್ಥಳೀಯರಾದ ಭರತ್,ಸುರೇಶ್ ಭಟ, ಶೇಷಕುಮಾರ್ ಶೆಟ್ಟಿ, ಜಗದೀಶ ಪಡ್ಪು ಮತ್ತಿತರರು ಉಪಸ್ಥಿತರಿದ್ದರು.