ಪೆರುವಾಜೆ ಶಾಲಾ ಶಿಕ್ಷಕಿ ಶ್ರೀಮತಿ ಲಲಿತ ಕುಮಾರಿ ನಿವೃತ್ತಿ – ಸನ್ಮಾನ, ಬೀಳ್ಕೊಡುಗೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರುವಾಜೆಯಲ್ಲಿ ಹಿರಿಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಗೊಂಡ ಲಲಿತ ಕುಮಾರಿಯವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ಎ.04 ರಂದು ಶಾಲೆಯಲ್ಲಿ ನಡೆಯಿತು.


ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಶ್ರೀಮತಿ ಲಲಿತರವರು ತಾನು ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಜಯಪ್ರಕಾಶ್ ಅಲೆಕ್ಕಾಡಿ ಅವರಿಗೆ ಗೌರವಾರ್ಪಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಜಯಕುಮಾರ್ , ಉಪಾಧ್ಯಕ್ಷರಾದ ಶ್ರೀಮತಿ ಸವಿತಾ , ಪೆರುವಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶಹಿನಾಝ್, ಸದಸ್ಯರಾದ ಪದ್ಮನಾಭ ಶೆಟ್ಟಿ , ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣಪ್ಪ ಎಂ , ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀಮತಿ ಶೀತಲ್ ಯು ಕೆ , ಬೆಳ್ಳಾರೆ ಕ್ಲಸ್ಟರ್ ಶಿಕ್ಷಣ ಸಂಯೋಜಕರಾದ ಶ್ರೀಮತಿ ಸಂಧ್ಯಾ ಕುಮಾರಿ , ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಅನುರಾಧ ಎ ಆರ್ , ಶ್ರೀಮತಿ ಲಲಿತಾಕುಮಾರಿಯವರ ಪತಿ ಗೋಪಾಲಕೃಷ್ಣ ಮನವಳಿಕೆ, ಮಗ ಸತ್ಯಗಣೇಶ, ಸೊಸೆಯಂದಿರಾದ ಶ್ರೀಮತಿ ಕೀರ್ತನಾ, ಶ್ರೀಮತಿ ಶ್ರೀವಲ್ಲಿ, ಮೊಮ್ಮಕ್ಕಳಾದ ಮಹತಿ, ಪ್ರಣತಿ, ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಮತಿ ಸುಪ್ರಿಯಾ , ಮುಕ್ಕೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ದಯಾಕರ ಆಳ್ವ, ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿಗಳಾದ ತಿರುಮಲೇಶ್ವರ , ಮುಖ್ಯೋಪಾಧ್ಯಾಯರಾದ ಶ್ರೀಮತಿ ಶೃತಿ, ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಪಂಚಾಯತ್ ಸಿಬ್ಬಂದಿಗಳು, ಹಳೆ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.