ಕಲ್ಲುಗುಂಡಿ : ಬೈಕ್ ಅಪಘಾತ, ಸವಾರನಿಗೆ ಗಾಯ

0

ಕಲ್ಲುಗುಂಡಿ ಸೇತುವೆಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಕಲ್ಲುಗುಂಡಿಯಲ್ಲಿ ನಡೆದಿದೆ.
ಗಾಯಗೊಂಡ ಯುವಕ ಕೊಡಗು ಸಂಪಾಜೆ ಚೆಂಬು ಮೂಲದ ಕೆದಂಬಾಡಿ ಪುರುಷೋತ್ತಮರ ಮಗ ಭುವನ್ ಎಂಬುವವರು ಎಂದು ತಿಳಿದುಬಂದಿದೆ. ಗಾಯಾಳುವನ್ನು ಕೂಡಲೇ ಸುಳ್ಯ ಆಸ್ಪತ್ರೆಗೆ ಕಲ್ಲುಗುಂಡಿ ಹೊರಠಾಣೆಯ ಪೊಲೀಸ್ ಸಿಬ್ಬಂದಿ ರಾಜು ಮತ್ತು ತಾಜುದ್ದೀನ್ ಟರ್ಲಿ ಇವರು ದಾಖಲಿಸಿದ್ದು ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.