ಸ್ಕೂಟಿ ಸವಾರನ ಕಾಲಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಅಡ್ಕಾರ್ ಬಳಿ ಮುಖ್ಯ ರಸ್ತೆಯಲ್ಲಿ ಬೈಕ್ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಸವಾರನ ಕಾಲಿಗೆ ಗಂಭೀರ ಗಾಯವಾದ ಘಟನೆ ಏ 14 ರಂದು ರಾತ್ರಿ ನಡೆದಿದೆ.
ಕಾಲಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಸ್ಕೂಟಿ ಸವಾರ ಪರಪ್ಪೆ ಮೂಲದವರಾಗಿದ್ದು ಅವರು ಅಡ್ಕಾರಿ ನಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಸ್ಕೂಟಿ ಸವಾರ ಮುಖ್ಯರಸ್ತೆಯಿಂದ ಅಡ್ಕಾರ್ ದರ್ಗಾದ ರಸ್ತೆ ಕಡೆಗೆ ತಿರುವು ಪಡೆಯುತ್ತಿದ್ದ ಸಂದರ್ಭ ಅದರ ಇಂದಿನಿಂದ ಬರುತ್ತಿದ್ದ ಜಾಲ್ಸೂರು ಪರಿಸರದ ವ್ಯಕ್ತಿಯೊಬ್ಬರ ಬೈಕ್ ಸ್ಕೂಟಿಗೆ ಡಿಕ್ಕಿ ಆಗಿದೆ ಎನ್ನಲಾಗಿದೆ.
ಈ ವೇಳೆ ಸ್ಕೂಟಿಯಲ್ಲಿ ಮಹಿಳೆ ಹಾಗೂ ಮಗು ಇದ್ದು ಘಟನೆಯಿಂದ ಸ್ಕೂಟಿ ಸವಾರನ ಕಾಲಿಗೆ ಗಂಭೀರ ಗಾಯವಾಗಿ,ಮಗುವಿಗೂ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ.
ಕೂಡಲೇ ಸ್ಥಳೀಯರು ಗಾಯಗೊಂಡವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.