ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ನಡೆಯುತ್ತಿರುವ ನಲಿ ಕಲಿ ಮಕ್ಕಳ ಬೇಸಿಗೆ ಶಿಬಿರದ ನಾಲ್ಕನೇ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಅಂತರಾಷ್ಟ್ರೀಯ ಜಾದುಗಾರ ಜೂನಿಯರ್ ಶಂಕರ್ ಎ.15 ರಂದು ಆಗಮಿಸಿ ಮಕ್ಕಳಿಗೆ ಜಾದು ವಿಸ್ಮಯ ಲೋಕದ ಪರಿಚಯವನ್ನು ಮಾಡಿಕೊಡಲಿದ್ದಾರೆ.
ಪ್ರತಿಭಾನ್ವಿತ ಕಲಾವಿದೆಯಾಗಿರುವ ಗುರುಪ್ರಿಯ ಕಾಮತ್ ಇವರು ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಗಾನ ಲೋಕವನ್ನು ತೆರೆದಿಡಲಿದ್ದಾರೆ.