
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಏಪ್ರಿಲ್ 14ರಂದು ಡಾ| ಬಿ. ಆರ್. ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯನ್ನು ಶಿವಕೃಪಾ ಕಲಾಮಂದಿರದಲ್ಲಿ ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಸಭೆಯ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ ಅಂಬೇಡ್ಕರ್ ಕುರಿತು ಉಪನ್ಯಾಸ ನಡೆಸಿಕೊಟ್ಟರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಟಿ. ಎಂ. ಶಹೀದ್, ಮಾಜಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪ0ಗಾಯ, ಕೆ.ಪಿ.ಸಿ.ಸಿ. ಸದಸ್ಯೆ ಸರಸ್ವತಿ ಕಾಮತ್, ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕ ಕೆ.ಪಿ. ಜಾನಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿ ನಂದರಾಜ್ ಸಂಕೇಶ್ ಮೊದಲಾದವರು ಅಂಬೇಡ್ಕರ್ ಅವರ ಬದುಕು, ವಿಚಾರ ಹಾಗೂ ಆಶಯಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಫಾ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಯಪ್ರಕಾಶ್ ರೈ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ್, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಎಂ. ಹೆಚ್., ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಪರಮೇಶ್ವರ ಕೆಂಬಾರೆ, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ಇಂಟಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡೆಂಕೆರಿ, ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಸಿದ್ದಿಕ್ ಕೋಕೋ, ರಾಜು ಪಂಡಿತ್, ಪಕ್ಷದ ಮುಖಂಡರುಗಳಾದ ಸೋಮಶೇಖರ ಕೊಯಿಂಗಾಜೆ, ಮಹಮ್ಮದ್ ಕುಂಜ್ಞಿ ಗೂನಡ್ಕ, ಅಬ್ದುಲ್ ಗಫೂರ್ ಕಲ್ಮಡ್ಕ, ಬಾಪೂ ಸಾಹೇಬ್, ಧರ್ಮಪಾಲ ಕೊಯಿಂಗಾಜೆ, ದಿನೇಶ್ ಮಡ್ತಿಲ, ಶ್ರೀಹರಿ ಕುಕ್ಕುಡೇಲು, ಎಸ್. ಸಂಶುದ್ದೀನ್, ತಿರುಮಲೇಶ್ವರಿ ಜಾಲ್ಸೂರು, ಬಿ. ಎಸ್. ಯಮುನಾ ಸಂಪಾಜೆ, ದಿನೇಶ್ ಹಾಲೆಮಜಲು, ಅಶ್ರಫ್ ಗುಂಡಿ, ರಾಹುಲ್ ಅಡ್ಪ0ಗಾಯ, ಯೂಸುಫ್ ಅಂಜಿಕ್ಕಾರ್, ಜತ್ತಪ್ಪ ರೈ, ಅನಸೂಯ ಬಿ. ಎ., ಕಾಂತಿ ಸಂಪಾಜೆ, ಶೌವಾದ್ ಗೂನಡ್ಕ, ಸೌಮ್ಯ ಕುಮಾರಿ ಸಂಪಾಜೆ, ಕೇಶವ ಮೊರಂಗಲ್ಲು, ಅಬ್ಬಾಸ್ ಎ. ಬಿ., ಎಸ್. ಜುಬೇರ್, ಕರುಣಾಕರ ಮಡ್ತಿಲ, ಶಹೀದ್ ಪಾರೆ, ಭವಾನಿ ಎಂ. ಪಿ., ಹರ್ಷಿತ್ ಗೌಡ, ಪ್ರಮೀಳಾ ಪೆಲ್ತಡ್ಕ, ಅಣ್ಣು ಮುಗೇರ ಮರ್ಕಂಜ, ಕುಮಾರಿ ಶ್ರೀಪೂರ್ಣ ಗಬ್ಬಲಡ್ಕ, ವೆಂಕಟೇಶ್, ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಎಡಮಲೆ ಉಪಸ್ಥಿತರಿದ್ದರು.