ಕರಾಟೆಯಲ್ಲಿ ರಂಗ ಮಯೂರಿ ಕಲಾ ಶಾಲೆಯ ಧನುಷ್ ಗೌಡ ಮಜಿಕ್ಕೋಡಿಗೆ ಪ್ರಶಸ್ತಿ

0

 

 

10 ಸೌತ್ ಇಂಡಿಯಾ ಕರಾಟೆ ಮತ್ತು ಕುಂಗ್-ಫೂ ಓಪನ್ ಚಾಂಪಿಯನ್ ಶಿಪ್ ನಲ್ಲಿ ಸುಳ್ಯದ ರಂಗ ಮಯೂರಿ ಕಲಾ ಶಾಲೆಯ ಕರಾಟೆ ವಿದ್ಯಾರ್ಥಿ ಧನುಷ್ ಗೌಡ ಮಜಿಕ್ಕೋಡಿ ಹತ್ತರಿಂದ ಹದಿನೈದು ವಯೋಮಿತಿಯ “ಪೈಟಿಂಗ್ “ವಿಭಾಗದಲ್ಲಿ ಪ್ರಥಮ ಹಾಗೂ “ಕಠ “ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಕರಾಟೆ ತರಬೇತುದಾರ ಚಂದ್ರಶೇಖರ ಕನಕಮಜಲು‌ ಮಾರ್ಗದರ್ಶನ ನೀಡಿದ್ದಾರೆ. ಪೆರಾಜೆಯ ಕುಂಬಳಚೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 5 ನೇ ತರಗತಿ ವಿದ್ಯಾರ್ಥಿ. ಮಜಿಕ್ಕೋಡಿ ವಾಮನಾಥ ಮತ್ತು ಶ್ರೀಮತಿ ವೇದಾವತಿ ದಂಪತಿಯ ಪುತ್ರ.