ಸುಳ್ಯ ನಾವೂರು ಪರಿಸರದಲ್ಲಿ ಬೆಳ್ಳಂ ಬೆಳಿಗ್ಗೆ ಎನ್ ಐ ಎ ದಾಳಿ

0

 

ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಿಯಾಬ್ ಮನೆ ಮತ್ತು ಸುತ್ತಮುತ್ತ ತಪಾಸಣೆ

ಪ್ರವೀಣ್ ನೆಟ್ಟಾರು ಹತ್ಯೆ ಘಟನೆಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ( ಎನ್.ಐ.ಎ.) ಇಂದು ಮುಂಜಾನೆ ಸುಳ್ಯ ನಾವೂರು ಪರಿಸರಕ್ಕೆ ದಿಡೀರ್ ದಾಳಿ ನಡೆಸಿ, ತಮ್ಮ ವಶದಲ್ಲಿರುವ ಕೊಲೆ ಆರೋಪಿ ಶಿಯಾಬ್ ವಾಸವಾಗಿದ್ದ ಸುಳ್ಯ ನಾವೂರಿನ ಮನೆ ಮತ್ತು ಸುತ್ತಮುತ್ತ ತಪಾಸಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಬೆಳಿಗ್ಗೆ 5.30 ರ ಹೊತ್ತಿಗೆ ಆರು ವಾಹನಗಳಲ್ಲಿ ಬಂದ ಎನ್.ಐ.ಎ. ಅಧಿಕಾರಿಗಳು, ಕೊಲೆ ಆರೋಪಿ ಶಿಯಾಬ್ ಬಾಡಿಗೆಗಿದ್ದ ಮನೆಯಲ್ಲಿ ತಪಾಸಣೆ ನಡೆಸಿದರಲ್ಲದೆ ಸುತ್ತಮುತ್ತಲಿನ ಮನೆಯಲ್ಲೂ ವಿಚಾರಣೆ ನಡೆಸಿದರೆಂದು ತಿಳಿದುಬಂದಿದೆ.