ಕೈಕೊಟ್ಟ ಆಕ್ಸಿಜನ್ ಯಂತ್ರ : ಆಸರೆಯಾದ ಗುತ್ತಿಗಾರಿನ ಅಮರ ಟ್ರಸ್ಟ್‌ ನ ಅಂಬ್ಯೂಲೆನ್ಸ್

0
409

 

ಕೊಲ್ಲಮೊಗ್ರದ ವ್ಯಕ್ತಿಯೊಬ್ಬರನ್ನು ಸುಳ್ಯಕ್ಕೆ ಅಂಬ್ಯೂಲೆನ್ಸ್ ನಲ್ಲಿ ಕರೆದುಕೊಂಡು ಹೋದಾಗ ಆಕ್ಸಿಜನ್ ಯಂತ್ರ ತಾಂತ್ರಿಕ ತೊಂದರೆಗೆ ಒಳಗಾಗದಾಗ, ಗುತ್ತಿಗಾರಿನ ಅಮರ ಚಾರಿಟೇಬಲ್ ಟ್ರಸ್ಟ್ ನ ಅಂಬ್ಯೂಲೆನ್ಸ್ ಆಸರೆಯಾದ ಘಟನೆ ಅ.1 ರಂದು ನಡೆದಿದೆ.

ಉಸಿರಾಟದ ತೊಂದರೆಗೊಳಗಾದ ಕೊಲ್ಲಮೊಗ್ರದ ಕೆಂಚಪ್ಪ ಅವರನ್ನು 108 ಅಂಬ್ಯೂಲೆನ್ಸ್ ನಲ್ಲಿ ಸುಳ್ಯಕ್ಕೆ ಕರೆತರಲಾಗುತ್ತಿತ್ತು. ಆಕ್ಸಿಜನ್ ಅಳವಡಿಸಿ ಕೊಂಡೊಯುತಿದ್ದ ಸಂದರ್ಭದಲ್ಲಿ, ಗುತ್ತಿಗಾರಿಗೆ ತಲುಪುವಾಗ ವಾಹನದ ಆಕ್ಸಿಜನ್ ತಾಂತ್ರಿಕ ತೊಂದರೆಗೆ ಒಳಗಾಗಿ ಸ್ಥಗಿತಗೊಂಡಿತ್ತು.
ಇದರ ಮಾಹಿತಿ ಪಡೆದ ಅಮರ ಚಾರಿಟೇಬಲ್ ಟ್ರಸ್ಟ್ ನ ಅಂಬ್ಯೂಲೆನ್ಸ್ ನ ವಾಹನದಲ್ಲಿ ಆಕ್ಸಿಜನ್ ಅಳವಡಿಸಿ ಮೋಹನ್ ದಾಸ್ ಶಿರಾಜೆ ಮತ್ತು ರಾಜೇಶ್ ಉತ್ರಂಬೆ ತಕ್ಷಣವೇ ಸ್ಪಂದಿಸಿ ವ್ಯಕ್ತಿಯನ್ನು ಸುಳ್ಯ ಆಸ್ಪತ್ರೆಗೆ ತಲುಪಿಸಲು ಯಶಸ್ವಿಯಾಗಿದ್ದು ಅವರು ಚೇತರಿಸಿಕೊಂಡಿರುವುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here