ಕುಲ್ಕುಂದ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಲೇಖನಿ ಸಾಮಗ್ರಿಗಳ ವಿತರಣೆ

0

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಹಾಗೂ ರೋಟರಿ ಕ್ಲಬ್ ವತಿಯಿಂದ ಜೂ. 9 ರಂದು ಕುಲ್ಕುಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಲೇಖನಿ ಸಾಮಗ್ರಿಗಳನ್ನು ನೀಡಲಾಯಿತು.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಅಧ್ಯಕ್ಷ ವಿಶ್ವನಾಥ ನಡು ತೋಟ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಗೋಪಾಲ್ ಎಣ್ಣೆ ಮಜಲ್, ನಿಯೋಜಿತ ಅಧ್ಯಕ್ಷ ಪ್ರಶಾಂತ್ ಕೋಡಿ ಬೈಲು, ಸೀನಿಯರ್ ಚೇಂಬರ್ ಕಾರ್ಯದರ್ಶಿ ಪ್ರಕಾಶ್ ಕಟ್ಟೆಮನೆ, ಶಾಲಾ ಮುಖ್ಯ ಶಿಕ್ಷಕ ಮಲ್ಲೇಶಪ್ಪ, ಗೌರವ ಶಿಕ್ಷಕಿ ಸುದೀಕ್ಷಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.