ಹಜ್ ಯಾತ್ರೆಗೆ ತೆರಳಿದ ಕನಕಮಜಲು ಗ್ರಾ.ಪಂ. ಸದಸ್ಯ ಇಬ್ರಾಹಿಂ ಕಾಸಿಂ ಅವರಿಗೆ ಬೀಳ್ಕೊಡುಗೆ

0

ಒಂದೂವರೆ ತಿಂಗಳ ಹಜ್ ಯಾತ್ರೆಗೆ ತೆರಳಿದ ಕನಕಮಜಲು ಗ್ರಾಮ ಪಂಚಾಯತಿ ಸದಸ್ಯ ಇಬ್ರಾಹಿಂ ಕಾಸಿಂ‌ ಅವರನ್ನು ಕನಕಮಜಲಿನ ಸಿರಾಜುಲ್ ಇಸ್ಲಾಂ ಮದ್ರಸದ ವತಿಯಿಂದ ಜೂ.6ರಂದು ಸನ್ಮಾನಿಸಿ, ಬೀಳ್ಕೊಡಲಾಯಿತು.

ಮಸೀದಿಯ ಗುರುಗಳಾದ ಅಬ್ದುಲ್ಲ ಫೈಝಿ, ಆಶೀಕ್ ಇರ್ಫಾನಿ ಅವರು ಮದ್ರಸದ ವತಿಯಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಮಹಮ್ಮದ್ ಫವಾಝ್ ಕನಕಮಜಲು, ಅಲಿ ಹಾಜಿ ಕನಕಮಜಲು, ಅಬೂಬಕ್ಕರ್ ಕೆ.ಇ., ಹಸನ್ ಗೌಸಿಯಾ, ಮಹಮ್ಮದ್ ಕುಂಞಿ ಪಂಜಿಗುಂಡಿ, ಅಶ್ರಫ್ ಕೆ.ಇ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.