ಸುದ್ದಿ ಕೃಷಿ ಸೇವಾ ಕೇಂದ್ರದ ವತಿಯಿಂದ ಮೊಜಂಟಿ ಜೇನು ತರಬೇತಿ ಕಾರ್ಯಾಗಾರ

0

ಮೊಜಂಟಿ ಜೇನು ಕೃಷಿ ಅಪಾಯಕಾರಿಯಲ್ಲ : ವೆಂಕಟಕೃಷ್ಣ ಭಟ್

“ತಿಳಿದುಕೊಳ್ಳುವ ಆಸಕ್ತಿಯುಳ್ಳವರು ಮೊಜಂಟಿ ಕೃಷಿ ಮಾಡಬೇಕು. ಇದು ಯಾವುದೇ ರೀತಿಯಲ್ಲಿ ಅಪಾಯ ಮಾಡದೆ ಇರುವುದರಿಂದ ಪ್ರಾಥಮಿಕ ಮಾಹಿತಿ ಪಡೆದು ಮೊಜಂಟಿ ಕೃಷಿ ಮಾಡುವುದು ಉತ್ತಮ. ಯಾವುದೇ ರೀತಿಯ ಪೆಟ್ಟಿಗೆಯಲ್ಲೂ ಈ ಕೃಷಿ ಮಾಡಬಹುದು ” ಎಂದು ಜೇನು ಕೃಷಿಕ ವೆಂಕಟಕೃಷ್ಣ ಭಟ್ ಪಾಣಾಜೆ ಅವರು ಹೇಳಿದರು.

ಜೂ.10 ರಂದು ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಸುದ್ದಿ ಕೃಷಿ ಸೇವಾ ಕೇಂದ್ರದ ವತಿಯಿಂದ ನಡೆದ ಮೊಜಂಟಿ ಜೇನು ಕೃಷಿ ತರಬೇತಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾಹಿತಿ ನೀಡಿದರು.

ಜೇನು ಕೃಷಿಯಲ್ಲಿ ರಾಣಿ ಜೇನು ಮುಖ್ಯವಾಗಿದ್ದು, ಅದಕ್ಕೆ ಪೂರಕವಾದ ವಾತಾವರಣವನ್ನು ನಾವು ಮಾಡಬೇಕು ಎಂದು ಅವರು ಹೇಳಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಸಗಾರದಲ್ಲಿ 45 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಉದ್ಘಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ರವರು, “38 ವರ್ಷಗಳ ಹಿಂದೆ ಡಾ.ಯು.ಪಿ.ಶಿವಾನಂದರು ಸುದ್ದಿ ಬಿಡುಗಡೆ ಪತ್ರಿಕೆಯನ್ನು ಪ್ರಾರಂಭಿಸುವಾಗ ಮಾಹಿತಿ ಕೇಂದ್ರವನ್ನು ಕೂಡ ಸ್ಥಾಪಿಸಿದ್ದರು. ಜನರಿಗೆ ಸರಿಯಾದ ಮಾಹಿತಿ ದೊರೆತರೆ ಅವರ ಅರ್ಧ ಕೆಲಸ ಆದಂತೆ. ಕೃಷಿಕರಿಗೆ ಸರಿಯಾದ ಮಾಹಿತಿ, ತರಬೇತಿ, ಮಾರ್ಕೆಟಿಂಗ್ ಸಹಕಾರ ನೀಡುವ ಉದ್ದೇಶದಿಂದ ಎರಡು ವರ್ಷದ ಹಿಂದೆ ಸುದ್ದಿ ಕೃಷಿ ಸೇವಾ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಕೃಷಿಕರಿಗೆ ಬೇಕಾದ ತರಬೇತಿಗಳು ಹಾಗೂ ಮಾರಕಟ್ಟೆ ಮಾಹಿತಿ, ಕೃಷಿಯ ಉಪುತ್ಪನ್ನಗಳ. ಮಾರಾಟಕ್ಕೆ ಸಹಕಾರ ನೀಡಲಾಗುತ್ತಿದೆ ” ಎಂದರು.


ವೇದಿಕೆಯಲ್ಲಿ ಸುದ್ದಿ ಚಾನೆಲ್ ನ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ, ರಂಗ ಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸುದ್ದಿ ಕೃಷಿ ಸೇವಾ ಕೇಂದ್ರದ ನಿರ್ವಾಹಕಿ ರಮ್ಯ ಸತೀಶ್ ಕಳಂಜ ಸ್ವಾಗತಿಸಿ, ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ವಂದಿಸಿದರು.
ಬೃಂದಾ ಪೂಜಾರಿ ಮುಕ್ಕೂರು ಕಾರ್ಯಕ್ರಮ ನಿರೂಪಿಸಿದರು.