ಇಂದ್ರಾಜೆ ಶಾಲೆಯಲ್ಲಿ ಕೈ ತೊಳೆಯುವ ಘಟಕದ ಉದ್ಘಾಟನಾ ಕಾರ್ಯಕ್ರಮ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಸ.ಕಿ. ಪ್ರಾ. ಶಾಲೆ ಇಂದ್ರಾಜೆಯಲ್ಲಿ ನಿರ್ಮಿಸಲಾದ ಕೈ ತೊಳೆಯುವ ಘಟಕದ ಉದ್ಘಾಟನಾ ಕಾರ್ಯಕ್ರಮವು ಜು.38 ರಂದು ಶಾಲಾ ವರಾರದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪಂಜ ವಲಯ ಅರಣ್ಯಾಧಿಕಾರಿಗಳಾದ ಗಿರೀಶ್ ಇವರು ಭಾಗವಹಿಸಿ ಕೈತೊಳೆಯುವ ಘಟಕವನ್ನು ಉದ್ಘಾಟಿಸಿದರು.


ರೋಟರಿ ಕ್ಲಬ್ ಅಧ್ಯಕ್ಷರಾದ ಶಶಿಧರ ಬಿ. ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಎಸ್. ಡಿ .ಎಂ.ಸಿ ಅಧ್ಯಕ್ಷರಾದ ಶಿವರಾಮ ಕೊಳಂಜಿಕೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೆ.ಪಿ. ಶೇಖರ, ಕಳಂಜ ಬಾಳಿಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪು, ಬಾಳಿಲ ಗ್ರಾ.ಪಂ.ಸದಸ್ಯರಾದ ಪಾವನ, ಮುಖ್ಯ ಶಿಕ್ಷಕಿ ಸುವರ್ಣ ಚಂದ್ರಿಕಾ ಉಪಸ್ಥಿತರಿದ್ದರು.

ರೋ. ರವೀಂದ್ರ ಗೌಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.ರೋ | ಅನಂತ ತಂಟೆಪ್ಪಾಡಿ ವಂದಿಸಿದರು. ರೊ ಎ.ಕೆ.ಮಣಿಯಾಣಿ ಕಾರ್ಯಕ್ರಮ ನಿರೂಪಿಸಿದರು.ರೋ ಪ್ರಮೋದ್ ಕೆ.ಕೆ.,ರೋ ಬಾಲಕೃಷ್ಣ ಮಡ್ತಿಲ ಭಾಗವಹಿಸಿದರು.