ಮುಖ್ಯಮಂತ್ರಿಯ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ದ.ಕ ಸಂಪಾಜೆ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಸಂಘದ ವ್ಯವಹಾರಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರು ಎ.ಎಸ್.ಪೊನ್ನಣ್ಣರವರನ್ನು ಸನ್ಮಾನಿಸಿದರು.
2018 ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದು ಗ್ರೀನ್ ಲಿಸ್ಟ್ ನಲ್ಲಿದ್ದರೂ ಹಣ ಬಿಡುಗಡೆಯಾಗದ ರೈತರ ಪಟ್ಟಿ ಕೊಟ್ಟು ಸಾಲಮನ್ನಾದ ಹಣ ಬಿಡುಗಡೆ ಮಾಡಲು ಮನವಿ ಮಾಡಿದರು ಮತ್ತು ಕೇಂದ್ರ ಸರಕಾರದ ಸಹಕಾರಿ ಸಂಘಗಳ ಮಾದರಿ ಬೈಲಾ ತಿದ್ದುಪಡಿ ಬಗ್ಗೆ ಮನವರಿಕೆ ಮಾಡಿ ಕೊಡಲಾಗಿದ್ದು ಸಂವಿಧಾನದ ಪ್ರಕಾರ ಸಹಕಾರಿ ಸಂಘ ರಚಿಸುವುದು ಜನರ ಮೂಲಭೂತ ಹಕ್ಕಾಗಿದ್ದು ಕೇಂದ್ರ ಸರಕಾರವು ಸಂವಿಧಾನಕ್ಕೆ ವಿರುದ್ದವಾಗಿ ಈ ಕಾಯ್ದೆ ಜಾರಿ ಮಾಡಿರುತ್ತಾರೆ. ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲು ನನ್ನಿಂದಾದ ಸಹಾಯ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆಯವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು .ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಾನಿ.ಕೆ.ಪಿ.ಯವರು ಸಂಪಾಜೆ ಗ್ರಾಮದ ಜಮೀನಿನ ದಾಖಲೆಗಳ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕ ಸ್ಮಶಾನದ ಬಗ್ಗೆ ಜಂಟಿ ಸರ್ವೆಯ ಅನಿವಾರ್ಯತೆ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಉತ್ತರಿಸಿದ ಎ.ಎಸ್ ಪೊನ್ನಣ್ಣ ರವರು ಕಂದಾಯ ಸಚಿವರನ್ನು ಮತ್ತು ಅರಣ್ಯ ಸಚಿವರನ್ನು ಕರೆಸುವ ಭರವಸೆ ನೀಡಿದರು .ಸಹಕಾರಿ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ವಂದಿಸಿದರು.
ಈ ಸಂದರ್ಭದಲ್ಲಿ
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜಾ ಉತ್ತಪ್ಪ ಸಿ.ಇ.ಒ. ವೀರೇಂದ್ರ ಜೈನ್ ಕೊಡಗು ಸಂಪಾಜೆಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮೊಯಿದೀನ್ ಕುಂಞಿ, ಸಹಕಾರಿ
ಸಂಸ್ಥೆಯ ನಿರ್ದೇಶಕರಾದ ಹಮೀದ್ ಹೆಚ್. ,ಸುಮತಿ ಶಕ್ತಿವೇಲು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶೌವಾದ್ ಗೂನಡ್ಕ ,ಅಬೂಸಾಲಿ ಗೂನಡ್ಕ ,ವಿಮಲಾ ಪ್ರಸಾದ್ ,ಅನುಪಮ ರಂಗಪ್ಪ , ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಎ.ಕೆ.ಇಬ್ರಾಹಿ, ಧರ್ಮಪಾಲ ಕೊಯಿಂಗಾಜೆ, ರಾಜು ನೆಲ್ಲಿಕುಮೇರಿ ,ಲೂಕಾಸ್ ಟಿ.ಐ , ಸೆಬಾಸ್ಟಿಯನ್ ನೆಲ್ಲಿಕುಮೇರಿ, ಕಾಂತಿ ಬಿ.ಎಸ್, ರಹೀಂ ಬೀಜದಕಟ್ಟೆ, ಶೆಮೀರ್ , ಬಿ.ಎಸ್ ಹನೀಫ್, ನಾಗಮುತ್ತು ನೆಲ್ಲಿಕುಮೇರಿ , ಪ್ರಮುಖರಾದ ಸೂರಜ್ ಹೊಸೂರು ,ಸುರೇಶ್. ಪಿ.ಎಲ್,ಸುರೇಶ್ ಪೆರುಮುಂಡ ಆದಂಕುಂಞಿ ಸಂಟ್ಯಾರ್ ,ಹನೀಫ್ ಎಸ್.ಪಿ.,ಪಿ.ಎ ಅಹಮ್ಮದ್ ಬಾಲೆಂಬಿ ಮತ್ತಿತರರು ಉಪಸ್ಥಿತರಿದ್ದರು.