ದಿ.ರವಿ ಜಯನಗರ ರವರ ಕುಟುಂಬಕ್ಕೆ ಆಹಾರಧಾನ್ಯಗಳ ಕಿಟ್ಟ್ ನೀಡಿ ಹೃದಯ ವಿಶಾಲತೆ ಮೆರೆದ ಸೃಷ್ಟಿ ಮೊಬೈಲ್ ಸಂಸ್ಥೆಯ ಮಾಲಕ

0

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ವರ್ಷಗಳ ಕಾಲ ನಿರಂತರ ಚಿಕಿತ್ಸೆ ಪಡೆದು ಚಿಕಿತ್ಸೆ ಫಲಕಾರಿಯಾಗದೆ ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದ ಕೂಲಿ ಕಾರ್ಮಿಕ ರವಿ ಜಯನಗರ ರವರ ಕುಟುಂಬಕ್ಕೆ ಪ್ರತಿ ತಿಂಗಳ ಆಹಾರ ಧಾನ್ಯಗಳ ಕಿಟ್ ನೀಡುವ ಮೂಲಕ ಸುಳ್ಯದ ಸೃಷ್ಟಿ ಮೊಬೈಲ್ ಸಂಸ್ಥೆಯ ಮಾಲಕರು ಹೃದಯ ವಿಶಾಲತೆಯನ್ನು ಮೆರೆದಿದ್ದಾರೆ.

ಕುಟುಂಬಕ್ಕೆ ಆಸರೆಯಾಗಿದ್ದ ರವಿ ಜಯನಗರ ಎಂಬುವರು ಮನೆ ಕಟ್ಟುವ ಕೆಲಸಕ್ಕೆ ಹೋಗಿದ್ದ ಸಂದರ್ಭ ಗೋಡೆಯಿಂದ ಆಯತಪ್ಪಿ ಬಿದ್ದು ತಮ್ಮ ಸೊಂಟದ ಕೆಳಭಾಗ ಸಂಪೂರ್ಣವಾಗಿ ಸ್ವಾಧೀನವನ್ನು ಕಳೆದುಕೊಂಡಿದ್ದರು.

ನಿರಂತರವಾಗಿ ಎರಡು ವರ್ಷಗಳ ಕಾಲ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚಿಕಿತ್ಸೆ ಫಲಕಾರಿಯಾಗದೆ ಬಳಿಕ ಅವರು ಮೃತಪಟ್ಟಿದ್ದರು.
ಇವರ ಮನೆಯಲ್ಲಿ ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳು ಇದ್ದು ರವಿಯವರ ಪತ್ನಿ ಹೋಟೆಲ್ ಕೆಲಸ ಮಾಡಿ ಬರುವ ಆದಾಯದಿಂದ ಮನೆ ಬಾಡಿಗೆ ಮತ್ತು ಮಕ್ಕಳ ಶಿಕ್ಷಣ, ಮನೆಯ ಖರ್ಚು ವೆಚ್ಚವನ್ನು ನೋಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದನ್ನು ತಿಳಿದ ಸುಳ್ಯದ ಸೃಷ್ಟಿ ಮೊಬೈಲ್ ಸಂಸ್ಥೆಯ ಮಾಲಕರಾದ ಶೈಲೇಂದ್ರ ಸರಳಾಯರವರು ಆ ಕುಟುಂಬಕ್ಕೆ ಪ್ರತಿ ತಿಂಗಳ ಆಹಾರ ಧಾನ್ಯಗಳನ್ನು ಕಿಟ್ ನೀಡುವ ಉತ್ತಮ ಕಾರ್ಯಕ್ಕೆ ಮುಂದಾಗಿ ಈ ತಿಂಗಳ ಆಹಾರ ಸಾಮಗ್ರಿಗಳನ್ನು ಆಗಸ್ಟ್ 28 ರಂದು ನೀಡುವ ಮೂಲಕ ಸಹಾಯ ಹಸ್ತ ಕಾರ್ಯಕ್ಕೆ ಚಾಲನೆ ನೀಡಿದರು.