ದ ಕ ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಉಪ ಸಮಾಧೇಷ್ಠ ರಮೇಶ್ ರವರಿಗೆ ಸುಳ್ಯ ಗೃಹರಕ್ಷಕ ದಳದಿಂದ ಸನ್ಮಾನ

0

ಮಂಗಳೂರು ಗೃಹರಕ್ಷಕ ದಳ ಕಚೇರಿಯಲ್ಲಿ ಸೇವೆಯಿಂದ ನಿವೃತ್ತಿಯೊಂದುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಉಪ ಸಮಾಧೇಷ್ಠ ರಮೇಶ್ ರವರಿಗೆ ಸುಳ್ಯ ಗೃಹ ರಕ್ಷಕ ದಳ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾ ಗೃಹರಕ್ಷಕ ದಳದ ಸಮಾಧೇಷ್ಟರಾದ ಡಾ.ಮುರಳಿ ಮೋಹನ್ ಚೂಂತಾರು ರಮೇಶ್ ರವರನ್ನು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸುಳ್ಯ ಘಟಕಾಧಿಕಾರಿ ಸೋಮನಾಥ್,ಸಿಬ್ಬಂದಿಗಳಾದ ಅಬ್ದುಲ್ ರಜ್ಜಾಕ್, ಲೋಕನಾಥ, ಗೋಪಾಲ,ಪದ್ಮಯ್ಯ ಗೌಡ, ಪುಷ್ಪಾವತಿ, ಗೀತಾ ಜಯನಗರ, ಶೃತಿ ಮೊದಲಾದವರು ಉಪಸ್ಥಿತರಿದ್ದರು.