ಕೇರ್ಪಡ : ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಧಾರ್ಮಿಕ ಸಭೆ – ದೇಣಿಗೆ ಹಸ್ತಾಂತರ, ಸಹಾಯಧನ ವಿತರಣೆ

0

ಎಡಮಂಗಲ ಗ್ರಾಮದ ಶ್ರೀ ಕ್ಷೇತ್ರ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಹತ್ತನೇ ದಿನವಾದ ಅ.೨೪ರಂದು ಧಾರ್ಮಿಕ ಸಭೆ ನಡೆಯಿತು. ದೀಪ ಪ್ರಜ್ವಲನೆ ಮಾಡಿದ ಶಾಸಕಿ ಕುಮಾರಿ ಭಾಗೀರಥಿಯವರು ಮಾತನಾಡುತ್ತಾ, ಇಲ್ಲಿ ದೇವಿಯ ಭಕ್ತಾಧಿಗಳ ಮನಸ್ಸು ಚಂಚಲ, ಅವರು ಕೆಲಸ ಕಾರ್ಯ ಕೈಗೊಂಡರೆ ಮಾತ್ರ ಸಾಧ್ಯ. ಯಾರಿಂದಲೂ ಸಾಧ್ಯವಿಲ್ಲ. ಜನಪ್ರತಿನಿಧಿಗಳು ನಿಮಿತ್ತ. ದೇವರ ಮೇಲೆ ನಂಬಿಕೆಯಿಂದ ಇದ್ದರೆ ಭಕ್ತಿಪೂರಕ ಸೇವಾ ಸಮಿತಿಗಳು ಶ್ರದ್ಧೆ ಕೂಡಿದ ಮನಸುಗಳಲ್ಲಿ ಒಂದಾದರೆ ಯಾವುದು ಕಷ್ಟ ಸಾಧ್ಯವಲ್ಲ ಎಂದು ಭಾವಪರವಶರಾಗಿ ಹೇಳಿದರು. ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಸಾದ್ವಿ ಶ್ರೀ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿ, “ಪ್ರೀತಿ ಪ್ರಾಮಾಣಿಕತೆ ಆದರ್ಶಪ್ರಾಯರಾಗಿ ಸುಸಂಸ್ಕೃತರಾಗಿ, ಆಂತರಿಕ ವಿಚಾರಣೆ ಧಾರಣೆಯೊಂದಿಗೆ ಭಾಗಶಃ ವಿಚಾರಣೆ ಧಾರಣೆ ಮಾಡಿ ಧರ್ಮ ರಕ್ಷಣೆಯನ್ನು ದುರ್ಗಣ ಶಕ್ತಿ ನಿರ್ಮೂಲನೆ ಹೋಗಲಾಡಿಸಿ ಜ್ಞಾನಶಕ್ತಿಯೊಂದಿಗೆ ಆದರ್ಶ ಬದುಕು ಸಾಧಿಸಬೇಕೆಂದರು”. ವಿಟ್ಲ ಗುರುಕುಲಂ ಮಾತೃಶ್ರೀ ಮೈತ್ರಿಯ ಕು. ಸಿಂಚನ ಕಾನತ್ತೂರು ಧಾರ್ಮಿಕ ಉಪನ್ಯಾಸ ನೀಡುತ್ತಾ, ಸಂತೋಷವೇ ಹಬ್ಬ.ಮೇಲಿಂದ ಮೇಲೆ ಹಬ್ಬ ಬಂದರೆ ಉತ್ಸಾಹ,ಹುಮ್ಮಸ್ಸು ಹೆಚ್ಚಾಗುತ್ತದೆ. ಉಪವಾಸ, ವೃತ ಅನುಷ್ಠಾನ ಮಾಡಿದರೆ ನೆನೆದ ಕೆಲಸ ನೆರವೇರುತ್ತದೆ.ಕಾರ್ಯಸಿದ್ಧಿಯಾಗುತ್ತದೆ, ಇಚ್ಛಾಶಕ್ತಿ, ಜ್ಞಾನ ಶಕ್ತಿ, ಕ್ರಿಯಾಶಕ್ತಿ ಮೈಗೂಡಿಸಿದರೆ ಪ್ರಾಪ್ತಿ ಲಭಿಸುತ್ತದೆ” ಎಂದರು.


ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಅಧ್ಯಕ್ಷತೆ ವಹಿಸಿ ಮಾತನಾಡಿ, ೧೧ ವರ್ಷದ ಹಿಂದೆ ಬ್ರಹ್ಮಕಲ ನಡೆದಿದೆ. ಬರುವ ವರ್ಷ ಬ್ರಹ್ಮಕಲಶೋತ್ಸವ ನಡೆಯಲಿದೆ, ಉಳಿದ ಜೀರ್ಣೋದ್ಧಾರ ಕಾರ್ಯಕ್ರಮಗಳಲ್ಲಿ ಕಲ್ಯಾಣಿಕೆರೆ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಪೂರ್ಣಗೊಳಿಸಲು ಭಕ್ತಾಧಿಗಳ ಸಹಕಾರ ಕೋರಿದರು . ಸಭಾಭವನ, ಪಾಕಶಾಲೆ, ಭೋಜನ ಶಾಲೆ ಅಭಿವೃದ್ಧಿಗೊಳಿಸಬೇಕಿದೆ ಎಂದರು.
ಪ್ರಣವ ಫೌಂಡೇಶನ್ ಬೆಂಗಳೂರು, ಗೌರವ ಸಲಹೆಗಾರ ವಿಶ್ವನಾಥ ರೈ ಪೆರ್ಲ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು, ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ವನಿತಾ ಸುವರ್ಣ ಬಾಮೂಲೆ, ಮುರುಳ್ಯ ಎಣ್ಮೂರು ಪ್ರಾ. ಕೃ.ಪ.ಸ ಸಂಘದ ಅಧ್ಯಕ್ಷೆ ಶ್ರೀಮತಿ ಕುಸುಮಾವತಿ ರೈ ಕೆ.ಜಿ. ವೇದಿಕೆಯಲ್ಲಿದ್ದರು. ಅನ್ನೋವು ಗೀತ ಪ್ರಕಾಶ್ ರವರ ಮಗು ಮನ್ವಿ ೧೧ ವರ್ಷದಿಂದ ಅನಾರೋಗ್ಯದಿಂದ ಮನೆಯಲ್ಲಿ ತೆವಳಿಕೊಂಡು ಬದುಕುತ್ತಿದ್ದು ದೇವಸ್ಥಾನದ ವತಿಯಿಂದ ಮತ್ತು ಕೇರ್ಪಡ ಕಲಾಸಂಘ ವತಿಯಿಂದ ಧನ ಸಹಾಯ ನೀಡಿದ್ದು . ಕೇರ್ಪಡ ಸಂಘದ ವತಿಯಿಂದ ೧೦,೦೦೦ ಸಾವಿರ ರೂಪಾಯಿ ಧನಸಹಾಯ ಅಧ್ಯಕ್ಷರ ಮೂಲಕ ಹಸ್ತಾಂತರಿಸಲಾಯಿತು. ನೂಜಡಿ ಕಿಟ್ಟು ತಂಡ ಪ್ರತಿ ವರ್ಷದಂತೆ ಹುಲಿ ವೇಷ ಧರಿಸಿ ಕುಣಿತದಿಂದ ಸಂಗ್ರಹವಾದ ಹಣ ೧,೦೦,೫೯೦ ವೇದಿಕೆಯಲ್ಲಿ ಸಭಾಭವನ ಅಭಿವೃದ್ಧಿ ಎಂದು ಅಧ್ಯಕ್ಷರಿಗೆ ಹಸ್ತಾಂತರ ಮಾಡಲಾಯಿತು. ಹುಲಿವೇಷ ತಂಡದವರು ನವರಾತ್ರಿಯಲ್ಲಿ ದುಡಿದ ಉಳಿದವರನ್ನು ಗುರುತಿಸಿ ಗೌರವಿಸಲಾಯಿತು.


ದೇವಿಗೆ ಹರಕೆ ಸಮರ್ಪಣೆ ಮಾಡಿದ ಸೀರೆ ಲಕ್ಕಿ ಡ್ರಾದಲ್ಲಿ ೯೭,೨೦೦ ರೂ. ಸೇವಾ ಸಮಿತಿಯವರು ಹಸ್ತಾಂತರಿಸಿದರು.


ಎಣ್ಮೂರು ಪ್ರದೀಪ್ ರೈ ಕಾರ್ಯಕ್ರಮ ನಿರೂಪಣೆ ಮಾಡಿದರು. ವ್ಯವಸ್ಥಾಪನೆ ಸಮಿತಿ ಕಾರ್ಯದರ್ಶಿ ವೆಂಕಪ್ಪ ಗೌಡ ಆಲಾಜೆ ಪ್ರಸ್ತಾವನೆ ಗೈದು ಸ್ವಾಗತಿಸಿದರು. ಅಲೆಕ್ಕಾಡಿ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಭಾಗ್ಯ ಪ್ರಸನ್ನ ಕೆ. ವಂದಿಸಿದರು. ಅ.೨೩ರಂದು ಆಯುಧ ಪೂಜೆ ನಡೆದು ಅ.೨೪ರಂದು ಬೆಳಿಗ್ಗೆ ಗಣ ಹೋಮ, ಸೀಯಾಳಾಭಿಷೇಕ ಮಹಾ ಸಂಪ್ರೋಕ್ಷಣೆ ಮತ್ತು ಮಹಾಅನ್ನಸಂತರ್ಪಣೆ ನಡೆಯಿತು.