ಬೆಳ್ಳಾರೆ ಧಾತ್ರಿ ಟ್ರೇಡರ್ಸ್ ಶುಭಾರಂಭ

0

ಬೆಳ್ಳಾರೆಯ ಸಿ.ಎಂ. ಕಾಂಪ್ಲೆಕ್ಸ್ ನಲ್ಲಿ ವಿವೇಕ್ ಜಿ.ಆರ್ ಮಾಲಕತ್ವದ ಧಾತ್ರಿ ಟ್ರೇಡರ್ಸ್ ಸುಪರ್ ಮಾರ್ಕೆಟ್ ನ. 16ರಂದು ಶುಭಾರಂಭಗೊಂಡಿತು.
ವೇ.ಮೂ. ಶಾಂತಕುಮಾರ ಭಟ್ ಕಾಯಾರ ಪೂಜಾ ಕಾರ್ಯಕ್ರಮ ನಡೆಯಿತು. ಮಾಲಕ ವಿವೇಕ್ ಜಿ.ಆರ್. ರವರ ತಂದೆ ರಾಮಚಂದ್ರ ಅಕ್ಕಿಗದ್ದೆ, ತಾಯಿ ಸುಮಿತ್ರಾ ಸೇರಿದಂತೆ ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೂತನ ಸಂಸ್ಥೆಯಲ್ಲಿ ದಿನಸಿ ಸಾಮಾಗ್ರಿಗಳು, ನಂದಿನಿ ಉತ್ಪನ್ನಗಳು, ಐಸ್ ಕ್ರೀಂ ಸೇರಿದಂತೆ ಎಲ್ಲಾ ರೀತಿಯ ಗೃಹಬಳಕೆಯ ಸಾಮಾಗ್ರಿಗಳು ದೊರೆಯಲಿದೆ.